ಯಜೀನ್: ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪುರುಷ ಲಾಂಗ್ ಜಂಪರ್ ಎಂಬ ಹಿರಿಮೆಗೆ ಅಥ್ಲೀಟ್ ಮುರಳಿ ಶ್ರೀಶಂಕರ್ ಪಾತ್ರರಾಗಿದ್ದಾರೆ.
ಡಾರ್ಕ್ ಹಾರ್ಸ ನಂತೆ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಪ್ರವೇಶಿಸಿದ್ದ ಮುರಳಿ ಶ್ರೀಶಂಕರ್ ಈ ಋತುವಿನ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ. ಶನಿವಾರ ನಡೆದ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ 8 ಮೀ.ಜಿಗಿದು ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ನಡೆದ ಫಡರೇಶನ್ ಕಪ್ ನಲ್ಲಿ 8.36 ಮೀ.ಜಿಗಿದಿದ್ದರು. ಗ್ರೀಸ್ ಕ್ರೀಡಾಕೂಟದಲ್ಲಿ 8.31 ಮೀ. ಮತ್ತು ಅಂತಾರಾಜ್ಯ ಕ್ರೀಡಾಕೂಟದಲ್ಲಿ 8.23 ಮೀ, ಹಾರಿದ್ದರು.
ಇದಕ್ಕೂ ಮುನ್ನ 2003ರಲ್ಲಿ ಅಂಜು ಬಾಬಿ ಜಾರ್ಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಫೈನಲ್ ತಲುಪಿ ಕಂಚು ಗೆದ್ದಿದ್ದರು.
ಸದ್ಯ ನಡೆಯುತ್ತಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮತ್ತೊರ್ವ ಭಾರತೀಯ ಅಥ್ಲೀಟ್ ಅವಿನಾಶ್ ಸೇಬ್ಲ್ ಪುರುಷರ 3 ಸಾವಿರ ಸ್ಟೀಪಲ್
ಚೇಸ್ ವಿಭಾಗದ ಓಟದ ಹೀಟ್ಸ್ ನಲ್ಲಿ 8:18.75 ಸೆ.ನಲ್ಲಿ ಗುರಿ ತಲುಪಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

