ವಿಶ್ವ ಅಥ್ಲೆಟಿಕ್ಸ್ :ಫೈನಲ್‍ಗೆ ಎಲ್ಡೋಸ್ ಪೌಲ್

ಯುಜೀನ್ (ಯುಎಸ್ಎ) :ಪುರುಷರ  ಟ್ರಿಪಲ್ ಜಂಪ್ ವಿಭಾಗದಲ್ಲಿ  ಎಲ್ಡೋಸ್ ಪೌಲ್ ಫೈನಲ್ ಪ್ರವೇಶಿಸಿದ್ದಾರೆ. ಟ್ರಿಪಲ್ ಜಂಪ್‍ನಲ್ಲಿ ಫೈನಲ್ ತಲುಪಿದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಎ ಗುಂಪಿನಲ್ಲಿ  ನಡೆದ ಅರ್ಹತಾ ಸುತ್ತಿನಲ್ಲಿ  16.68ಮೀ. ದೂರ ಹಾರಿ 6ನೇ ಸ್ಥಾನ ಪಡೆದರು. ಒಟ್ಟು 12ನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಾಳೆ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ವೀಸಾ ಸಮಸ್ಯೆಯಿಂದಾಗಿ ಕ್ರೀಡಾಕೂಟಕ್ಕೆ ತಡವಾಗಿ ಬಂದ ಪೌಲ್ ಕಳೆದ ಏಪ್ರಿಲ್‍ನಲ್ಲಿ  ಫೆಡರೇಶನ್ ಕಪ್‍ನಲ್ಲಿ  16.99 ಮೀ. ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ್ದರು.

ಇನ್ನು ಇದೇ ವಿಭಾಗದಲ್ಲಿ  ಇನ್ನಿಬ್ಬರು ಟ್ರಿಪಲ್ ಜಂಪರ್‍ಗಳಾದ ಪ್ರವೀಣ್ ಚಿತ್ರವೆಲ್ ಮತ್ತು  ಅಬ್ದುಲ್ಲಾ ಅಬೂಬಾಕರ್ ಫೈನಲ್‍ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. 16.49 ಮೀ. ಮತ್ತು 16.45 ಮೀ. ಜಿಗಿದು ವಿಫಲರಾದರು. ಚಿತ್ರವಲ್ ಎ ಗುಂಪಿನಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಒಟ್ಟು 17ನೇ ಸ್ಥಾನ ಪಡೆದರು. ಅಬೂಬುಕ್ಕರ್ ಬಿ ಗುಂಪಿನಲ್ಲಿ 19ನೇ ಸ್ಥಾನ ಪಡೆದರು.  12 ಅತ್ಯುತ್ತಮ ಅಥ್ಲೀಟ್‍ಗಳು ಅರ್ಹತೆ ಪಡೆದರು.

 

About The Author