ಗಾಲೆ: ದಿನೇಶ್ ಚಾಂಡಿಮಲ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಆತಿಥೇಯ ಶ್ರೀಲಂಕಾ ತಂಡ ಪಾಕಿಸ್ಥಾನ ವಿರುದ್ಧ ಎರಡನೆ ಟೆಸ್ಟ್ ಪಂದ್ಯದ ಮೊದಲ ದಿನ 315 ರನ್ ಗಳಿಸಿ ದಿನದ ಗೌರವ ಸಂಪಾದಿಸಿದೆ.
ಗಾಲೆಯಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಒಶಾಡಾ ಫೆರ್ನಾಡೊ (50 ರನ್) ಹಾಗೂ ನಾಯಕ ದೀಮುತ್ ಕರುಣರತ್ನೆ (40 ರನ್) ಮೊದಲ ವಿಕೆಟ್‍ಗೆ 92 ರನ್ ಗಳ ಉತ್ತಮ ಆರಂಭ ನೀಡಿದರು.
ಮೂರನೆ ಕ್ರಮಾಂಕದಲ್ಲಿ ಬಂದ ಕುಸಾಲ್ ಮೆಂಡೀಸ್ 3ರನ್ ಗಳಿಸಿದ್ದಾಗ ರನೌಟ್ ಬಲೆಗೆ ಬಿದ್ದರು. ನಾಯಕ ದೀಮುತ್ ಕರುಣೆರತ್ನೆ 40 ರನ್ ಗಳಿಸಿ ಮುನ್ನಗುತ್ತಿದ್ದಾಗ ಯಸೀರ್ ಶಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಆ್ಯಂಜಿಲೊ ಮ್ಯಾಥ್ಯೂಸ್ ಜೊತೆಗೂಡಿದ ದಿನೇಶ್ ಚಾಂಡಿಮಲ್ ತಂಡದ ಕುಸಿತ ತಡೆದರು. ಜೋಡಿ ಪಾಕ್ ದಾಳಿಯನ್ನು ಸಮರ್ಥಕವಾಗಿ ಎದುರಿಸಿ 75 ರನ್‍ಗಳ ಜೊತೆಯಾಟ ನೀಡಿತು.
ಅದರೆ 42 ರನ್ ಗಳಿಸಿ ಮುನ್ನಗುತ್ತಿದ್ದ ಆ್ಯಂಜಿಲೊ ಮ್ಯಾಥ್ಯೂಸ್ ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ದಿನೇಶ್ ಚಾಂಡಿಮಲ್ ಅರ್ಧ ಶತಕ ಸಿಡಿಸಿದರು.
ನಂತರ 80 ರನ್ ಗಳಿಸಿದ್ದಾಗ ದಿನೇಶ್ ಚಾಂಡಿಮಲ್ ಮೊಹ್ಮದ್ ನವಾಜ್‍ಗೆ ವಿಕೆಟ್ ಒಪ್ಪಿಸಿದರು. ಇವರಿಗೆ ಒಳ್ಳೆಯ ಸಾಥ್ ನೀಡಿದ ನಿರೋಶನ್ ಡಿಕ್ವೆಲ್ಲಾ ಅಜೇಯ 42 ರನ್ ದುನೀತ್ ವೆಲ್ಲಾಲಾಗೆ ಅಜೇಯ 6 ರನ್ ಗಳಿಸಿ ಎರಡನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಮೊದಲ ಇನ್ನಿಂಗ್ಸ್‍ನಲ್ಲಿ 6 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿದೆ. ಪಾಕ್ ಪರ ಮೊಹ್ಮದ್ ನವಾಜ್ 2, ಯಾಸೀರ್ ಶಾ, ನೌಮನ್ ಅಲಿ ಮತ್ತು ನಾಸೀಮ್ ಶಾ ತಲಾ 1 ವಿಕೆಟ್ ಪಡೆದರು.