ಬೆಂಗಳೂರು: ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದ್ದಂತ ಮಂಕಿಪಾಕ್ಸ್ ಪ್ರಕರಣ, ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬೆಂಗಳೂರಿಗೆ ಆಫ್ರಿಕಾದಿಂದ ಬಂದಂತ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಜುಲೈ.4ರಂದು ಆಫ್ರಿಕಾದಿಂದ ಬೆಂಗಳೂರಿಗೆ ವ್ಯಕ್ತಿಯೊಬ್ಬರು ಕಿಡ್ನಿ ಕಸಿ ಸಂಬಂಧ ಆಗಮಿಸಿದ್ದರು. ಅವರ ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಂಡುಬಂದಿದ್ದವು. ಮಂಕಿಪಾಕ್ಸ್ ಗುಣಲಕ್ಷಣಗಳು ತೋರಿದ್ದವು ಎಂದು ತಿಳಿಸಿದೆ.
ಅವರಿಗೆ ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದೆ.




