ಬೆಂಗಳೂರು: 13 ಶಾಸಕರ ರಾಜೀನಾಮೆ ಪತ್ರಗಳ ಪೈಕಿ 8 ಮಂದಿಯ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದು ಹೇಳಿದ ಹಿನ್ನೆಲೆ ಹಾಗೂ ಸುಪ್ರೀಂನ ಆದೇಶದಂತೆ ಇಂದು ಮುಂಬೈನಿಂದ ಬಂದ ಅತೃಪ್ತ ಶಾಸಕರು ಮತ್ತೆ ರಾಜೀನಾಮೆ ಸಲ್ಲಿಸಿದರು.
ಮುಂಬೈನಿಂದ ವಿಶೇಷ ವಿಮಾನದ ಮೂಲಕ ವಿಧಾನಸೌಧದಲ್ಲಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ರನ್ನು ಭೇಟಿ ಮಾಡಿದ ಅತೃಪ್ತ ಶಾಸಕರಾದ, ಬೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್, ನಾರಾಯಣಗೌಡ, ಪ್ರತಾಪಗೌಡ ಪಾಟೀಲ್, ಬಿ.ಸಿ ಪಾಟೀಲ್ , ಗೋಪಾಲಯ್ಯ, ಶಿವರಾಮ್ ಹೆಬ್ಬಾರ್ ಸ್ಪೀಕರ್ ಎದುರಿಗೆ ಮರು ರಾಜೀನಾಮೆ ಪತ್ರವನ್ನ ಬರೆದು ಸಲ್ಲಿಕೆ ಮಾಡಿದ್ರು.
ಇನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಬಂದಿದ್ದ ಅತೃಪ್ತ ಶಾಸಕರು, ಮತ್ತೆ ಪೊಲೀಸರ ರಕ್ಷಣೆಯೊಂದಿಗೆ ಮರಳಿ ಏರ್ಪೋರ್ಟ್ ನತ್ತ ತೆರಳಿದ್ದು ಮುಂಬೈಗೆ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿದೆ.
ದೋಸ್ತಿಗೆ ಮತ್ತೊಂದು ಶಾಕ್..!ಮಿಸ್ ಮಾಡದೇ ಈ ವಿಡಿಯೋ ನೋಡಿ