- Advertisement -
ಬರ್ಮಿಂಗ್ ಹ್ಯಾಮ್:ಕರ್ನಾಟಕದ ಕುಂದಾಪುರ ಮೂಲದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಬ್ರಿಟನ್ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿಕಂಚು ಗೆದ್ದಿದ್ದಾರೆ.
ಇದರೊಂದಿಗೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ.
ಪುರುಷರ 61 ಕೆ.ಜಿ.ವಿಭಾಗದಲ್ಲಿ ಗುರುರಾಜ್ ಒಟ್ಟು 269 ಕೆ.ಜಿ. (118ಕೆ.ಜಿ- 151 ಕೆ.ಜಿ) ಭಾರ ಎತ್ತಿ ಕಂಚಿನ ಪದಕ ಜಯಿಸಿದರು. ಇದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗುರುರಾಜ್ ಗೆ 2ನೇ ಪದಕ 2018ರ ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಅವರು ಬೆಳ್ಳಿ ಗೆದ್ದಿದ್ದರು.
ಕಂಚು ಗೆದ್ದ ಗುರುರಾಜ್ಗೆ ರಾಜ್ಯ ಸರ್ಕಾರ 8 ಲಕ್ಷ ರೂ. ಬಹುಮಾನ ಘೋಷಿಸಿದೆ ಎಂದು ರಾಜ್ಯ ಕ್ರೀಡಾ ಸಚಿವಾಲಯ ತಿಳಿಸಿದೆ. ಪದಕವನ್ನು ಅಥ್ಲೀಟ್ ಗುರುರಾಜ್ ಪತ್ನಿ ಸೌಜನ್ಯಾಗೆ ಅರ್ಪಿಸಿರುವುದಾಗಿ ತಿಳಿಸಿದ್ದಾರೆ.
- Advertisement -