ಬರ್ಮಿಂಗ್‍ಹ್ಯಾಮ್: ಭಾರತದ ಮಹಿಳಾ ಜೂಡೊ ಎಲ್. ಸುಶೀಲಾ ದೇವಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ.
ಸೋಮವಾರ ನಡೆದ ಮಹಿಳಾ 48ಕೆ.ಜಿ.ವಿಭಾಗದ ಫೈನಲ್‍ನಲ್ಲಿ ಸುಶೀಲಾ ದೇವಿ ದಕ್ಷಿಣ ಆಫ್ರಿಕಾದ ಮೈಕಲಾ ವೈಟ್‍ಬೂಯಿ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದಕ್ಕೂ ಮುನ್ನ ಮಾರಿಷಸ್ ಪ್ರಿಸಿಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು.
27 ವರ್ಷದ ಮಣಿಪುರದ ಶುಶೀಲಾ ಫೈನಲ್‍ನಲ್ಲಿ ಮೈಕಲಿಯಾ ವೈಟ್‍ಬೂಹಿ ವಿರುದ್ಧ ಅಂತಿಮ ಕಾದಾಟ ನಡೆಸಿದ್ದರು. ಪಲೀಸ್ ಅಧಿಕಾರಿಯಾಗಿರುವ ಶುಶೀಲಾ ಕ್ವಾರ್ಟರ್‍ನಲ್ಲಿ ಮಾಲಾವಿಯ ಹಾರಿತ್ ಬೊನೇಸ್ ವಿರುದ್ಧ ಗೆದ್ದು ಮುನ್ನಡೆ ಪಡೆದಿದ್ದರು.
ಇನ್ನು ಪುರುಷರ 60ಕೆಜಿ ವಿಭಾಗದಲ್ಲಿ ವಿಜಯ್ ಕುಮಾರ್ ಯಾದವ್ ಅಮೋಘ ಪ್ರದರ್ಶನದ ನೆರೆವಿನಿಂದ ಕಂಚಿನ ಪದಕ ಗೆದ್ದಿದ್ದಾರೆ. ಸೈಪ್ರಸ್‍ನ ಪೆಟ್ರೊಸ್ ಕ್ರಿಸ್ಟೊಡೌಲೈಡ್ಸ್ ವಿರುದ್ಧ ಫೈನಲ್‍ಗೆ ಅರ್ಹತೆ ಪಡೆದಿದ್ದರು.
26 ವರ್ಷದ ವಿಜಯ್ ಕುಮಾರ್ 2108, 2019ರ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್ ಗೆದ್ದುಕೊಂಡಿದ್ದಾರೆ. ಪುರುಷರ 66 ಕೆಜಿ ಸೆಮಿ ಫೈನಲ್‍ನಲ್ಲಿ ಜಸ್ಲೀನ್ ಸಿಂಗ್ ಸೈನಿ ಸ್ಕಾಟ್‍ಲ್ಯಾಂಡ್‍ನ ಫಿನ್ಲೆ ಆಲನ್ ವಿರುದ್ಧ ಹೋರಾಡಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಸುಚಿಕಾ ತಾರಿಯಾಲ್ ದ.ಆಫ್ರಿಕಾದ ಡೊನ್ನೆ ಬ್ರೈಟೆನ್‍ಬಾಕ್ ಕಂಚಿನ ಪದಕದ ಸುತ್ತಿಗೆ ಲಗ್ಗೆ ಹಾಕಿದ್ದಾರೆ.