ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಲವ್ ಪ್ರೀತ್ ಸಿಂಗ್ ಪುರುಷರ 109 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ವೇಟ್ ಲಿಫ್ಟಿಂಗ್ ನಲ್ಲಿ ದೇಶದ ಪದಕದ ಓಟವನ್ನು ಮುಂದುವರಿಸಿದ್ದಾರೆ.
ಪಂಜಾಬ್ ನ 24 ವರ್ಷದ ಆಟಗಾರ ಕ್ಲೀನ್ ಮತ್ತು ಜರ್ಕ್ನಲ್ಲಿ 192 ಕೆಜಿ ಹೊಸ ರಾಷ್ಟ್ರೀಯ ದಾಖಲೆ ಸೇರಿದಂತೆ ಒಟ್ಟು 355 ಕೆಜಿ ಭಾರ ಎತ್ತುವ ಮೂಲಕ ಪೋಡಿಯಂನಲ್ಲಿ ಮೂರನೇ ಸ್ಥಾನ ಪಡೆದರು. ಅವರು ಸ್ನ್ಯಾಚ್ ನಲ್ಲಿ 163 ಕೆಜಿ ಎತ್ತಿದರು.
ಕ್ಯಾಮರೂನ್ನ ಜೂನಿಯರ್ ನಯಾಬೆಯು 361 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರೆ, ಸಮೋವಾದ ಜಾಕ್ ಒಪೆಲೋಜ್ 358 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಶೋಪೀಸ್ ನಲ್ಲಿ ಭಾರತ ಈವರೆಗೆ ಮೂರು ಚಿನ್ನ ಸೇರಿದಂತೆ ಎಂಟು ವೇಟ್ ಲಿಫ್ಟಿಂಗ್ ಪದಕಗಳನ್ನು ಗೆದ್ದಿದೆ.




