ಬರ್ಮಿಂಗ್‍ಹ್ಯಾಮ್: ಪದಕಗಳ ಮಳೆ ಸುರಿಸಿದ ಭಾರತ ನಿನ್ನೆ ಮುಕ್ತಾಯವಾದ ಪ್ರಸಕ್ತ ಕಾಮನ್‍ವೆಲ್ತ್‍ಕ್ರೀಡಾಕೂಟದಲ್ಲಿ ನಾಲ್ಕನೆ ಸ್ಥಾನ ಪಡೆದು ವಿದಾಯ ಹೇಳಿದೆ.
ಸೋಮವಾರ 11ನೇ ದಿನ ಕ್ರೀಡಾಕೂಟದಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಿತು.
https://aravindavk.in/ascii2unicode/
ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ್ದು ನಾಲ್ಕನೆ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲೂ ಅಂದು ಭಾರತ 22 ಚಿನ್ನ ಗೆದ್ದುಕೊಂಡಿತು.
2010ರಲ್ಲಿ ಆತಿಥ್ಯ ವಹಿಸಿದ್ದ ಭಾರತ ಅಂದು 38 ಚಿನ್ನ ಸೇರಿ 101 ಪದಕಗಳನ್ನು ಗೆದ್ದಿತ್ತು. ಒಟ್ಟಾರೆ ಪದಕಗಳ ಬೇಟೆಯನ್ನು ಗಮನಿಸಿದರೆ ಈ ಬಾರಿ ಐದನೆ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ ಹೊಸದಿಲ್ಲಿ (101), ಮ್ಯಾಂಚೆಸ್ಟರ್ 2002 (69), ಗೋಲ್ಡ್ ಕೋಸ್ಟ್ (66), ಗ್ಲಾಸ್ಗೊ (64) ಪದಕಗಳನ್ನು ಗೆದ್ದಿತ್ತು.
ಆಸ್ಟ್ರೇಲಿಯಾ 178 (67 ಚಿನ್ನ), ಇಂಗ್ಲೆಂಡ್ 176(57), ಕೆನಡಾ 92(26 ಚಿನ್ನ) ಗೆದ್ದುಕೊಂಡಿವೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಶೂಟಿಂಗ್ ವಿಭಾಗವನ್ನು ತೆಗೆದು ಹಾಕಿದಕ್ಕೆ ಭಾರತದ ಪದಕ ಬೇಟೆಗೆ ಪೆಟ್ಟು ಬಿದ್ದಿದೆ.ಆದರೂ ಅಂಕಪಟ್ಟಿಯ ಟಾಪ್5ರಲ್ಲಿ ಭಾರತ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ.
ವಿಶೇಷವೆಂದರೆ ಈ ಬಾರಿ ಸ್ರ್ಪಸಿದ ಎಲ್ಲಾ 12 ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ. ವೇಟ್‍ಲಿಫ್ಟಟರ್‍ಗಳು 3 ಚಿನ್ನ ಸೇರಿ 10 ಪದಕಗಳನ್ನು ಗೆದ್ದಿದ್ದಾರೆ. ಟೇಬಲ್ ಟೆನಿಸ್‍ನಲ್ಲಿ 4 ಚಿನ್ನ ಸೇರಿ 7 ಪದಕ ಗೆದ್ದಿದ್ದಾರೆ.

