ಹೊಸದಿಲ್ಲಿ:ಇಡೀ ವರ್ಷ ಕ್ರಿಕೆಟ್ ಆಡುವ ಭಾರತ ಕ್ರಿಕೆಟ್ ತಂಡಕ್ಕೆ ಬೆಂಚ್ ಸ್ಟ್ರೆಂತ್ ತುಂಬ ಮುಖ್ಯ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಭಾರತ ಗುಂಪಿನ ಹಂತದಲ್ಲೇ ನಿರ್ಗಮಿಸಿದ ನಂತರ ತಂಡದಲ್ಲಿ ಗಾಯದ ಸಮಸ್ಯೆ, ವರ್ಕ ಲೋಡ್ ಬಗ್ಗೆ ಆಡಳಿತ ಮಂಡಳಿ ಪ್ರಯೋಗಗಳನ್ನು ನಡೆಸಿದೆ.
ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಹೀಗಾಗಿ ತಂಡದಲ್ಲಿ ಗಾಯದ ಸಮಸ್ಯೆ ಮತ್ತು ವರ್ಕ ಲೋಡ್ ಇದೆ.ಹೀಗಾಗಿ ಆಟಗಾರರನ್ನು ರೊಟೇಟ್ ಮಾಡುತ್ತೇವೆ.
ಬೆಂಚ್ ಸ್ಟ್ರೆಂತ್ ಸಹಾಯದಿಂದ ನಾವು ಪಂದ್ಯಗಳನ್ನು ಆಡುತ್ತಿದ್ದೇವೆ.ಭವಿಷ್ಯ ಸುರಕ್ಷಿತವಾಗಿದೆ ಅನ್ನೋದನ್ನ ಖಾತ್ರಿಪಡಿಸಿಕೊಳ್ಳಬೇಕಿದೆ. ನಾವು ಈ ಪ್ರಯತ್ನದಲ್ಲಿ ಸಾಗಿದ್ದೇವೆ ಎಂದಿದ್ದಾರೆ ನಾಯಕ ರೋಹಿತ್,
ನಾವು ಸೋಲುತ್ತೇವೋ ಅಥವಾ ಗೆಲ್ಲುತ್ತೇವೋ ಅನ್ನೋದು ಮುಖ್ಯವಲ್ಲ. ಬಲಿಷ್ಠ ತಂಡವಾಗಿ ಬೆಳೆಸುವುದು ನಮ್ಮ ಆದ್ಯತೆಯಾಗಿದೆ.