- Advertisement -
ಮುಂಬೈ: ಕೆ.ಎಲ್. ರಾಹುಲ್ ನೇತೃತ್ವದ ಭಾರತೀಯ ತಂಡವು ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಹರಾರೆಗೆ ಬಂದಿಳಿದಿದೆ.
ಆಗಸ್ಟ್ 18ರಿಂದ ಸರಣಿಯ ಆರಂಭವಾಗಲಿದೆ.
ಗಾಯದ ಕಾರಣದಿಂದಾಗಿ ಫೆಬ್ರವರಿಯಿಂದ ಕ್ರಿಕೆಟ್ ಆಡದಿರುವ ರಾಹುಲ್ ಈಗ ಆಡಲು ಸ್ವಸ್ಥರಾಗಿರುವ ಕಾರಣ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಮೊದಲು ನಾಯಕನಾಗಿ ಆಯ್ಕೆಯಾಗಿದ್ದ ಶಿಖರ್ ಧವನ್ ಉಪನಾಯಕನಾಗಿ ನಿಯುಕ್ತರಾಗಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕಳಕೊಂಡ ರಾಹುಲ್ ವೆಸ್ಟಿಂಡೀಸ್ ಎದುರಿನ ಸರಣಿಗೆ ಬರಬೇಕಾಗಿತ್ತಾದರೂ ಆಗ ಅವರಿಗೆ ಕೋವಿಡ್ ಕಾಣಿಸಿಕೊಂಡಿತ್ತು. ಈಗ ಅವರು ಪೂರ್ಣ ಸ್ವಸ್ಥರಾಗಿದ್ದಾರೆ. ಅವರನ್ನು ಏಶ್ಯಾಕಪ್ ಆಡಲಿರುವ ತಂಡಕ್ಕೂ ಆಯ್ಕೆಮಾಡಲಾಗಿದೆ.
- Advertisement -

