ಸ್ವಾತಂತ್ರ್ಯ ದಿನವಾದ ಇಂದು ಕೆಂಪುಕೋಟೆಯಲ್ಲಿ ಹಬ್ಬದ ವಾತಾವರಣವಿತ್ತು.ದೇಶದ ಗೌರವಯುತ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದರು.
ಪ್ರತಿ ಸಮಾರಂಭದಲ್ಲೂ ತಮ್ಮ ವಿಶೇಷವಾದ ಉಡುಗೆಯಿಂದ ಗಮನ ಸೆಳೆಯುತ್ತಾರೆ ನಮ್ಮ ಪ್ರಧಾನಿ ಈ ಬಾರಿಯು ಮೋದಿ ತಮ್ಮ ಉಡುಗೆಗೆ ಸದಾ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು, ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವುದಾಗಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆಯಿಂದ ಬಹಳ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಧ್ವಜದ ಚಿತ್ರವಿರುವ ಟರ್ಬಾನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ವರ್ಣರಂಜಿತ ಪೇಟವನ್ನು ಧರಿಸುವ ಸಂಪ್ರದಾಯವನ್ನು ಮುಂದುವರಿಸಿರುವ ಪ್ರಧಾನಿ ರಾಷ್ಟ್ರ ಧ್ವಜದ ಚಿತ್ರವಿರುವ ಬಿಳಿ ಟರ್ಬಾನ್ (ಪೇಟ) ಧರಿಸಿದ್ದು ಎಲ್ಲರ ಗಮನ ಸೆಳೆಯಿತು.




