- Advertisement -
ಲಂಡನ್: ಭಾರತ ಕ್ರಿಕೆಟ್ ತಂಡದ ತಾರಾ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ ರಾಯಲ್ ಲಂಡನ್ ಕಪ್‍ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸಸ್ಸಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಎರಡನೆ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪೂಜಾರ 79 ಎಸೆತದಲ್ಲಿ 107 ರನ್ ಗಳಿಸಿದರು. ನಂತರ ಮುಂದಿನ 31 ಎಸೆತದಲ್ಲಿ 74 ರನ್ ಚಚ್ಚಿದರು. ಸಸ್ಸಕ್ಸ್ ತಂಡ ಬೃಹತ್ ಮೊತ್ತವನ್ನು ಬೆನ್ನತ್ತಲು ಪ್ರಯತ್ನಿಸಿತು ಆದರೆ ಗೆಲ್ಲುವಲ್ಲಿ ವಿಫಲವಾಯಿತು.
35ನೇ ಓವರ್ ನಂತರ ಪೂಜಾರ ಸಹ ಬ್ಯಾಟರ್ ಟಾಮ್ ಕ್ಲಾರ್ಕ್ ಜೊತೆಗೂಡಿ ಆಕ್ರಮಣಕಾರಿ ಹೊಡೆತಕ್ಕೆ ಮುಂದಾದರು. ಈ ಜೋಡಿ 205 ರನ್‍ಗಳ ಜೊತೆಯಾಟ ನೀಡಿತು.
ಪೂಜಾರ ಅತ್ಯದ್ಭುತ ಬ್ಯಾಟಿಂಗ್ ಮಾಡಿದರು. ಪೂಜಾರ ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಣ್ಣದ ಜೆರ್ಸಿಯಲ್ಲಿ ಆಡುವುದನ್ನು ಕಣ್ತುಂಬಿಕೊಂಡರು. ಈ ಸೌರಾಷ್ಟ್ರ ಬ್ಯಾಟರ್ 20 ಬೌಂಡರಿ ಹಾಗೂ 5 ಸಿಕ್ಸರ್‍ಗಳನ್ನು ಹೊಡೆದರು.
- Advertisement -

