Friday, March 14, 2025

Latest Posts

ಫಿಫಾ ನಡೆ ಅಚ್ಚರಿ ತಂದಿದೆ: ಆಡಳಿತಗಾರರ ಸಮಿತಿ (ಸಿಇಒ)

- Advertisement -

ಹೊಸದಿಲ್ಲಿ: ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ನ ವ್ಯವಸ್ಥೆ ಹಾಗೂ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಕೈಗೊಂಡ ಹೊರತಾಗಿಯೂ ವಿಶ್ವ ಫುಟ್ಬಾಲ್ ಫೆಡರೇಶನ್ ಫಿಫಾ ನಡೆ ದುರಾದೃಷ್ಟ ಹಾಗೂ ಅಚ್ಚರಿ ನೀಡಿದೆ ಎಂದು ಸುಪ್ರೀಮ್ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿ ಹೇಳಿದೆ.

ಆಡಳಿತ ವಿಚಾರವಾಗಿ ಫಿಫಾ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅನ್ನು ನಿಷೇಧಿಸಲು ಚಿಂತನೆ ನಡೆಸಿದೆ.ಈ ಕುರಿತು ಸುಪ್ರೀಮ್  ಕೋರ್ಟ್ ವಿಚಾರಣೆ ನಡೆಸುತ್ತಿದ್ದು ಇದಕ್ಕಾಗಿ ಆಡಳಿತಗಾರರ ಸಮಿತಿಯನ್ನು ನೇಮಿಸಿ ಕ್ರಮ ಕೈಗೊಂಡಿದೆ.

ಇಷ್ಟದರೂ ಫೀಫಾ ಅಮಾನತು ಮಾಡುವುದಾಗಿ ಬೆದರಿಕೆ ಹಾಕುತ್ತಿದೆ.ಜೊತೆಗೆ ಅಂಡರ್ 17 ಫುಟ್ಬಾಲ್ ಟೂರ್ನಿಯ ಆತಿಥ್ಯವನ್ನು ರದ್ದು ಮಾಡುವುದಾಗಿ ಎಚ್ಚರಿಸುತ್ತಿದೆ. ಇತ್ತ ಭಾರತ ಫುಟ್ಬಾಲ್ ಫೆಡರೇಶನ್ ಚುನಾವಣೆ ನಡೆಸಲು ಪ್ರಕರಣ ಕೋರ್ಟ್ ನಲ್ಲಿದೆ ಎಂದು ವಿವರಣೆ ನೀಡಿದೆ.

ಫೀಫಾ, ಎಫ್ ಸಿ, ಎಐಎಫ್ಎಫ್ ಸಿಇಒ, ಕೇಂದ್ರ ಕ್ರೀಡಾ ಅಚಿವಾಲಯ ನಡುವೆ ಮಾತುಕತೆ ನಡೆಯುತ್ತಿದ್ದರೂ ಫಿಫಾ ನಿರ್ಧಾರ ಅಚ್ಚರಿ ತಂದಿದೆ. ಮಾತುಕತೆಯಲ್ಲಿ 36 ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಚುನಾವಣೆ ನಡೆಸಲು ತೀರ್ಮಾನ ತೆಗದುಕೊಳ್ಳಲಾಗಿದೆ ಎಂದು ಸಿಇಒ ಹೇಳಿದೆ.

- Advertisement -

Latest Posts

Don't Miss