ದಿವಂಗತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ, ರಕ್ಷಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಮತ್ತು ಡಿ ಬಾಸ್ ಬಾಂಧ್ಯವದ ಬಗ್ಗೆ ಹೇಳಿಕೊಂಡಿದ್ದಾರೆ.
ಬುಲೇಟ್ ಪ್ರಕಾಶ್ ತೀರಿಕೊಂಡ ಬಳಿಕ ದರ್ಶನ್ ಪ್ರಕಾಶ್ ಕುಟುಂಬಕ್ಕೆ ಒಂದು ಭಾಷೆ ಕೊಟ್ಟಿದ್ರು. ರಕ್ಷಕ್ ಅಕ್ಕನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ದರ್ಶನ್ ಮಾತು ಕೊಟ್ಟಿದ್ರು. ಈ ಬಗ್ಗೆ ಮಾತನಾಡಿದ ರಕ್ಷಕ್, ಹೌದು, ತಂದೆ ತೀರಿ ಹೋದಾಗ, ನನ್ನ ತಾಯಿಗೆ ಕಾಲ್ ಮಾಡಿ, ನಿಮ್ಮ ಮಗಳ ಮದುವೆಯ ಜವಾಬ್ದಾರಿ ನನ್ನದು ಎಂದು ಹೇಳಿದರು. ಅದು ತುಂಬಾ ಖುಷಿಯಾಯ್ತು. ಅವರು ಸುಮಾರು ಜನಕ್ಕೆ ಸಹಾಯ ಮಾಡಿದ್ದಾರೆ. ಒಂದೆರಡಷ್ಟೇ ಬೆಳಕಿಗೆ ಬಂದಿದ್ದು. ಆದ್ರೆ ಗೊತ್ತಿಲ್ಲದ ಸಹಾಯ ತುಂಬಾ ಇದೆ ಎಂದು ರಕ್ಷಕ್ ಹೇಳಿದ್ದಾರೆ.
ಸಿನಿಮಾ ಲೋಕದ ಇಂಟ್ರಸ್ಟಿಂಗ್ ಸ್ಟೋರಿ ಫಟಾಫಟ್ ವಿಚಾರ
ಅಲ್ಲದೇ ದರ್ಶನ್ ರಕ್ಷಕ್‌ಗೆ ಸಿನಿಮಾ ಕರಿಯರ್ ಶುರು ಮಾಡೋಕ್ಕೆ ಸಾಕಷ್ಟು ಟಿಪ್ಸ್ ಕೊಡ್ತಾ ಇರ್ತಾರಂತೆ. ಇಂಡಸ್ಟ್ರಿಯಲ್ಲಿ ಹೇಗಿರಬೇಕು ಅಂತಾ ಕಲಿತುಕೋ. ನಂತರಪ ಸಿನಿಮಾ ರಂಗಕ್ಕೆ ಬರೋ ಬಗ್ಗೆ ಯೋಚಿಸು. ನೀನು ಒಂದಲ್ಲ ಒಂದು ದಿನ ಕ್ಯಾಮೆರಾ ಮುಂದೆ ಬರ್ತೀಯ. ಆದ್ರೆ ಅದಕ್ಕೂ ಮುನ್ನ ಕ್ಯಾಮೆರಾ ಹಿಂದಿನ ಕೆಲಸದ ಬಗ್ಗೆಯೂ ಅರಿತುಕೋ. ಸೆಟ್‌ನಲ್ಲಿ ಏನೇನು ಮಾಡ್ತಾರೆ ಅನ್ನೋದನ್ನ ತಿಳಿದುಕೋ ಎಂದು ದರ್ಶನ್ ಸಲಹೆ ಕೊಡ್ತಾರೆ ಅಂದಿದ್ದಾರೆ ರಕ್ಷಕ್.
ಕ್ರಾಂತಿ ಸಿನಿಮಾದ ಹೊಸ ಪೋಸ್ಟರ್ ರಿಲೀಸ್: ಪೋಸ್ಟರ್ ನಲ್ಲಿದೆ ಹೊಸತನ
ಇನ್ನು ದರ್ಶನ್ ಬಗ್ಗೆ ನಿಮಗಿರುವ ಉತ್ತಮ ಅಭಿಪ್ರಾಯ, ಇಷ್ಟವಾಗುವ ವಿಷಯ ಯಾವುದು ಅೞತಾ ಕೇಳಿದ್ದಕ್ಕೆ, ಡಿ ಬಾಸ್ ಫಾರ್ಮ್ ಹೌಸ್ ಮಾಡಿದ್ದಾರೆ. ಅಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅದು ನನಗೆ ತುಂಬಾ ಇಷ್ಟವಾಗುವ ವಿಷಯ. ಮೂಕ ಪ್ರಾಣಿಗಳು ಕೊನೆಯವರೆಗೂ ನಿಯತ್ತಾಗಿರತ್ತೆ. ಅಂಥ ಪ್ರಾಣಿಯನ್ನ ಡಿ ಬಾಸ್ ಯಾವುದೇ ಯೋಚನೆ ಮಾಡದೇ, ದತ್ತು ಪಡೆದು ಸಾಕುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ ರಕ್ಷಕ್,
ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು