ಬಡ್ಡಿ ಆಸೆ ತೋರಿಸಿ ಜನರಿಗೆ ಪಂಗನಾಮ..! : ಕೋಟಿ ಕಳೆದುಕೊಂಡು ಕಂಗಾಲಾದ ಜನ..!

Ballari News:

ಗಣಿನಾಡಿನಲ್ಲಿ  ಬಡ್ಡಿ ಆಸೆ ತೋರಿಸಿ ಪಂಗನಾಮ ಹಾಕಿದ ಘಟನೆ ನಡೆದಿದೆ. ಜನರು ಕಂಪೆನಿಯ ಮರುಳಿನ ಮಾತಿಗೆ ಕಿವಿಯೊಡ್ಡಿ ಇದೀಗ ಕೋಟಿ ಹಣವನ್ನೇ ಕಳೆದುಕೊಂಡಿದ್ದಾರೆ.ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಬಡ್ಡಿಕಡಿಮೆ ಬರುತ್ತದೆ.  ನೀವೂ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಪರ್ಸೆಂಟೇಜ್ ಬಡ್ಡಿ ನೀಡುತೇವೆ. ಹೂಡಿಕೆ ಮಾಡಿದ ಹಣಕ್ಕೆ ಕೆಲ ತಿಂಗಳಿಗೆ ಡಬಲ್ ಬಡ್ಡಿ ನೀಡುತ್ತೇವೆಂದು ಎಂದು ಹೇಳಿದ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ಮತ್ತೊಮ್ಮೆ ಬಳ್ಳಾರಿಯ ಜನರು ಕೋಟಿ ಕೋಟಿ ಹಣ ಕಳೆದು ಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಸಂಗ್ರಹವಾಗ್ತಿದ್ದಂತೆ ಆ ಮೂವರು ವಂಚಕರು ಪರಾರಿಯಾಗಿದ್ದಾರೆ, ಇತ್ತ ಹಣ ಹೂಡಿಕೆ ಮಾಡಿದ 400ಕ್ಕೂ ಹೆಚ್ಚು ಜನರು ಪೊಲೀಸ್ ಠಾಣೆ ಸುತ್ತುತ್ತಿದ್ದಾರೆ ಎನ್ನಲಾಗಿದೆ.

ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ರೆ ದಿನಕ್ಕೆ 2 ಸಾವಿರ ರೂಪಾಯಿ ಬಡ್ಡಿ ನೀಡುತ್ತೇವೆ ಎಂದು ಅಂತಾ ಟೆನ್ ಪೋರ್ಡ್ ಕಂಪನಿ ಆಮಿಷ್ ನೀಡಿತ್ತು. ವಂಚಕರ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ನೂರಾರು ಜನರು ಕೋಟ್ಯಂತರರೂಪಾಯಿ ಹಣವನ್ನ ಟೆನ್ ಪೋರ್ಡ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ರು. ಬರೋಬ್ಬರಿ 400ಕ್ಕೂ ಹೆಚ್ಚು ಜನರು ಟೆನ್ ಪೋರ್ಡ್ ಕಂಪನಿಯಲ್ಲಿ ಹತ್ತು ಕೋಟಿಗೂ ಅಧಿಕ ಹಣ ಹೂಡಿಕೆ ಮಾಡುತ್ತಿದ್ದಂತೆ ವಂಚಕರು ಪರಾರಿಯಾಗಿದ್ದಾರೆ. ಪೊಲೀಸರು ಈ ವಂಚಕರಿಗಾಗಿ ಹುಡುಕಾಡಿ ಸುಸ್ತಾಗಿದ್ದಾರೆ.

13 ವರ್ಷದ ಗೆಳೆಯನನ್ನು ಕತ್ತು ಸೀಳಿ ಕೊಲೆ ಮಾಡಿದ 16 ರ ಬಾಲಕ…! ಕಾರಣ ಕೇಳಿದ್ರೆ ಆಶ್ಚರ್ಯವಾಗುತ್ತೆ..!

 

ಚಲಿಸುತ್ತಿದ್ದ ರೈಲಿಗೆ ಪತ್ನಿಯನ್ನು ದೂಕಿ ಕೊಲೆಗೈದು ಪತಿ ಪರಾರಿ..!

 

ಆಡಳಿತಗಾರರ ಸಮಿತಿ ರದ್ದು ಮಾಡಿದ ಸುಪ್ರೀಮ್

About The Author