Sunday, May 19, 2024

Latest Posts

ಸೇಫ್ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ…!

- Advertisement -

Bigboss inside storry:

ಬಿಗ್ ಬಾಸ್ ಓಟಿಟಿ ಮನೆಯೊಳಗೆ ಇದೀಗ ಟಫ್ ಟಾಸ್ಕ್ ನಡೆಯುತ್ತಿದೆ,ಈಗಾಗಲೇ ಇಬ್ಬರು ಸ್ಪರ್ಧಿಗಳು ಸೇಫ್ ಆಗಿದ್ದಾರೆ.ಇನ್ನು ಈ ವಾರ ನಾಮಿನೇಟ್ ಪ್ರಕ್ರಿಯೆಯಲ್ಲಿ ಸೋನು ಶ್ರೀನಿವಾಸ್ ಗೌಡ ಸೇಫ್ ಆಗಿದ್ದಾರೆ.

ಈ ವಾರ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ನಾಮಿನೇಟ್ ಆದರು. ಸೋಮಣ್ಣ ಅವರನ್ನು ಕ್ಯಾಪ್ಟನ್ ಜಶ್ವಂತ್ ಅವರು ನೇರವಾಗಿ ನಾಮಿನೇಟ್ ಮಾಡಿದರು. ಎರಡು ಹಂತದಲ್ಲಿ ನಾಮಿನೇಟ್​ ಪ್ರಕ್ರಿಯೆ ನಡೆಯಿತು.

ಮೂರನೇ ಹಂತದಲ್ಲಿ ನಾಮಿನೇಷ್​​​​ನಿಂದ ಒಬ್ಬರನ್ನು ಸೇವ್​ ಮಾಡುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ನಂದಿನಿ ಸೇವ್ ಆದರು. ಈ ಮೂಲಕ ಉದಯ್, ರೂಪೇಶ್, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ವೋಟ್ ಬಿದ್ದಿದ್ದು ಉದಯ್​ಗೆ. ಅವರು ಡಬಲ್​ ಗೇಮ್ ಆಡುತ್ತಾರೆ, ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಬಹುತೇಕರು ಅವರನ್ನು ನಾಮಿನೇಟ್ ಮಾಡಿದರು. ಈಗ ವೀಕ್ಷಕರಿಂದ ಯಾರು ಕಡಿಮೆ ವೋಟ್ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆರಂಭದಲ್ಲಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದ ಸೋನು ಶ್ರೀನಿವಾಸ್​ ಗೌಡ ಅವರು ಮೊದಲ ಎರಡು ವಾರ ನಾಮಿನೇಟ್ ಆಗಿದ್ದರು. ಆದರೆ, ಈ ವಾರ ಅವರಿಗೆ ಯಾರೂ ವೋಟ್ ಮಾಡಿಲ್ಲ. ಹೀಗಾಗಿ, ಅವರ ಹೆಸರು ನಾಮಿನೇಷನ್​​ ಲಿಸ್ಟ್​ನಲ್ಲಿ ಇಲ್ಲ. ಇದು ಅವರ ಖುಷಿಯನ್ನು ಹೆಚ್ಚಿಸಿದೆ ಎನ್ನಲಾಗಿದೆ.

 

ಬಿಗ್ ಬಾಸ್ ಫಟಾಫಟ್ ಸ್ಟೋರಿ:

ಬಿಗ್ ಬಾಸ್ ಮನೆಯಿಂದ ಮತ್ತೊಬ್ಬರು ಔಟ್…!

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರಂತೆ ಸ್ಪೂರ್ತಿ….!

 

- Advertisement -

Latest Posts

Don't Miss