ರವಿಚಂದ್ರನ್ ಮಗನ ಮದುವೆಯಲ್ಲಿ ತಾರಾ ಬಳಗ, ರಾಜಕೀಯ ನಾಯಕರು..!

Film News:

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವಿವಾಹ ಬಹಳ ಅದ್ದೂರಿಯಾಗಿ ನಡೆಯಿತು. ವಿವಾಹ,ಅರತಕ್ಷತೆ ಸೇರಿ ಮೂರು ದಿನಗಳು ರವಿಮಾಮನ ಮನೆಯಲ್ಲಿ ಹಬ್ಬದ ವಾತಾವಾರಣವಿತ್ತು. ಬಹಳಷ್ಟು ತಾರಾಗಣವೇ ಮನೋರಂಜನ್ ಮದುವೆಗೆ ಸಾಕ್ಷಿಯಾಯಿತು. ಹೌದು ರವಿಚಂದ್ರನ್ ಮಗನ ವಿವಾಹ ಅಂದರೆ ಅದು ತಾರಾ ಬಳಗಕ್ಕೆ ಹಬ್ಬವೇ ಪ್ರತಿಯೊಬ್ಬರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧೂ ವರರಿಗೆ ಆಶಿರ್ವದಿಸಿದರು. ಒಂದೆಡೆ ತಾರಾ ಬಳಗ ಒಬ್ಬರ ಮೇಲೊಬ್ಬರಂತೆ ಆಗಮಿಸುತ್ತಿದ್ದರೆ ಮತ್ತೊಂದೆಡೆ ಅನೇಕ ರಾಜಕೀಯ ವ್ಯಕ್ತಿಗಳು ಆಗಮಿಸಿ ಹಾರೈಸಿದ್ರು.

ಸ್ಯಾಂಡಲ್ ವುಡ್ ನ ತ್ರಿಮೂರ್ತಿ ಸ್ಟಾರ್ಸ್ ಸುದೀಪ್ ದರ್ಶನ್  ಯಶ್ ಒಂದೆ ವೇದಿಕೆಯಲ್ಲಿ  ಒಟ್ಟಾದ್ರು. ಜೊತೆಗೆ ರಾಜಕಾರಣಿಗಳ ದಂಡೂ ಹರಿದು ಬಂತು ಡಿಕೆಶಿ,ಯಡಿಯೂರಪ್ಪ ಇತರರು  ಆಗಮಿಸಿದ್ರು.

ಸುಮಲತಾ ಅಂಬರೀಶ್,ತಾರಾ ಮಾಲಾಶ್ರಿ,ಹೀಗೆ ಹಿರಿಯರಿಂದ ಕಿರಿಯರ ವರೆಗೂ ಅನೇಕ ಕಲಾವಿದರು ಈ ಸುಸಂದರ್ಭಕ್ಕೆ ಸಾಕ್ಷಿಯಾದ್ರು.

ಚಾಲೆಂಜಿಂಗ್ ಸ್ಟಾರ್ ನ ಇಗ್ನೋರ್ ಮಾಡಿದ್ರಾ ಕ್ರೇಝಿ ಸ್ಟಾರ್…!?

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ…ಜನಪದ ಕಲೆ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ವಿಪಕ್ಷ ನಾಯಕ

ಸಿನಿ ಅಂಗಳದಲ್ಲಿ ಗಾಡ್ ಫಾದರ್ ಹವಾ..! ಸಖತ್ ಸೌಂಡ್ ಮಾಡ್ತಿದೆ ಟೀಸರ್..!

About The Author