Friday, December 27, 2024

Latest Posts

ಶ್ರೀಕಾಂತ್ ಗೆ ಸೋಲು, ಪ್ರೀಕ್ವಾರ್ಟರ್ಗೆ ಲಕ್ಷ್ಯ ಸೇನ್

- Advertisement -

ಲಂಡನ್:ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ ಸೇನ್ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ 12ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್ ಚೀನಾದ ಶ್ರೇಯಾಂಕಿತ ಆಟಗಾರ ಜಾಹೊ ಜನ್ ಪೆಂಗ್ ವಿರುದ್ಧ 21-9,21-17 ಅಂಕಗಳಿಂದ ಸೋತರು. 2021ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ದರು.

ಜಾಹೊ ಪೆಂಗ್ ವಿರುದ್ಧ ಶ್ರೀಕಾಂತ್ ಮೂರನೇ ಬಾರಿ ಸೋತಿದ್ದಾರೆ.

ಮತ್ತೊಂದು ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ ಸ್ಪೇನ್ ಲೂಹಿಸ್ ಎನ್ರಿಕ್ ಪೆನಾಲ್ವರ್ ವಿರುದ್ಧ 21-17, 21-10 ಅಂಕಗಳಿಂದ  ಗೆದ್ದು ಪ್ರೀ ಕ್ವಾರ್ಟರ್ಗೆ ಪ್ರವೇಶ ಪಡೆದರು. ಮಹಿಳಾ ಡಬಲ್ಸ್ ನಲ್ಲಿ ಗಾಯತ್ರಿ ಗೋಪಿಚಂದ್ ಜಾಲಿ ಟ್ರೆಸ್ಸಾ ಸೋಲು ಕಂಡಿದ್ದಾರೆ.

 

 

- Advertisement -

Latest Posts

Don't Miss