Film News:
ಕರುನಾಡ ಚಕ್ರವರ್ತಿ ಸುದೀಪ್ ಹಾಗು ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಫೋಟೋ ಇದೀಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ದಚ್ಚು ಕಿಚ್ಚ ಒಟ್ಟಾಗಿ ತೆರೆ ಮೇಲೆ ಬರುತ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಹಾಗಿದ್ರೆ ಏನಿದರ ನಿಜ ವಿಚಾರ …?ಇಲ್ಲಿದೆ ಕಂಪ್ಲೀಟ್ ಕಹಾನಿ.
ಕಿಚ್ಚ ಸುದೀಪ್ ಡಿ ಬಾಸ್ ದರ್ಶನ್ ಸ್ಯಾಂಡಲ್ ವುಡ್ ಶೈನಿಂಗ್ ಸ್ಟಾರ್ ಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಜೊತೆಗಿರುವ .ಫೋಟೋವೊಂದು ಸದ್ದು ಮಾಡುತ್ತಿದೆ. ಉತ್ತಮ ಸ್ನೇಹಿತರಾಗಿದ್ದ ಇಬ್ಬರ ಜೀವನದಲ್ಲಿ ತಡೆಗೋಡೆಯಾಗಿದ್ದು ಆ ಒಂದು ಪೋಸ್ಟ್.
ಹೌದು ದಚ್ಚು ಕಿಚ್ಚ ಅನ್ಯೋನ್ಯವಾಗಿದ್ದ ಆ ಸಮಯದಲ್ಲಿ ಅವರಿಬ್ಬರ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಅಂಬರೀಶ್ ರಂತೆ ಇವರಿಬ್ಬರು ಸ್ಯಾಂಡಲ್ ವುಡ್ ಕುಚುಕುಗಳು ಎಂದು ಅಭಿಮಾನಿಗಳು ಹೇಳುತ್ತಿದ್ದರು ಆದರೆ ದರ್ಶನ್ ನಾಯಕನಾದ ಮೆಜೆಸ್ಟಿಕ್ ಸಿನಿಮಾದ ಪ್ರಚಾರ ಕಾರ್ಯ ಇವರಿಬ್ಬರ ನಡುವೆ ದೊಡ್ಡ ಗೋಡೆಯನ್ನೇ ನಿರ್ಮಿಸಿತು. ಸುದೀಪ್ ಮಾತಿಗೆ ದರ್ಶನ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು ಸ್ಯಾಂಡಲ್ ವುಡ್ ನಲ್ಲೇ ಸಂಚಲನ ಮೂಡಿಸಿತ್ತು.
ದರ್ಶನ್ ಮಾಡಿದ ಟ್ವೀಟ್ ನಲ್ಲಿ ಏನಿತ್ತು ಗೊತ್ತಾ..?‘ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು’ ಎಂದು ದರ್ಶನ್ ಟ್ವೀಟ್ ಮಾಡಿದರು.
ಈ ಬೆಳವಣಿಗೆಯನ್ನು ಯಾರೂ ಸಹ ನಿರೀಕ್ಷಿಸಿರಲಿಲ್ಲ. ಅಂದಿನಿಂದ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆಯೂ ಒಂದು ಗೆರೆ ಮೂಡಿತು. ಅದು ಇಂದಿಗೂ ಮುಂದುವರಿಯುತ್ತಲೇ ಇದೆ ಎನ್ನುವುದು ಮಾತ್ರ ಇನ್ನೂ ಬೇಸರದ ಸಂಗತಿ.
ಅಭಿಮಾನಿ ಕರಣ್ ಕೈಚಳಕದಿಂದ ಒಂದಾಗಿದ್ರು ದರ್ಶನ್ ಸುದೀಪ್..! ಹೌದು ವರುಷದ ಹಿಂದೆ ಸುದೀಪ್ ದರ್ಶನ್ ಒಂದಾಗಿರೋ ಫೋಟೋ ಬಿಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಬಿಟ್ಟಿದ್ದರು ಕರಣ್ ಆಚಾರ್ಯ .ಆ ಫೋಟೋದಲ್ಲಿ ಸುದೀಪ್ ದರ್ಶನ್ ರಾಮ ಲಕ್ಷ್ಮಣರಾಗಿ ಕಾಣಿಸಿಕೊಂಡಿದ್ದು ಇಬ್ಬರು ಪೌರಾಣಿಕ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು ಆದರೆ ಇದು ಕಲಾವಿದನ ಕೈಚಲಕ ಎಂಬುವುದು ಆಮೇಲೆ ತಿಳಿಯಿತು.
ಆದೇ ಪ್ರಸಂಗ ಮತ್ತೆ ಮರುಕಳಿಸಿದೆ. ಸದ್ಯ ಸುದೀಪ್ ದರ್ಶನ್ ಫೋಟೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ದರ್ಶನ್ ಹಾಗು ಸುದೀಪ್ ಇಬ್ಬರು ಹೆಗಲಿಗೆ ಕೈ ಹಾಕಿರೋ ಪೋಟೋ ಅಭಿಮಾನಿಗಳ ಮನದಲ್ಲಿ ಮೂಡಿ ಹಾಗೆಯೇ ಅ ದನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಫೋಟೋ ನೋಡಿ ಅನೇಕರಿಗೆ ಸುದೀಪ್ ದರ್ಶನ್ ಮತ್ತೆ ಒಂದಾದ್ರಾ ಮತ್ತೆ ಸಿನಿಮಾದಲ್ಲಿ ನಟಿಸ್ತಾರಾ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇವು ಕೇವಲ ಅಭಿಮಾನಿಗಳ ಮನದಾಳದ ಆಸೆ ಹೀಗೆ ಭಿತ್ತರವಾಗಿದೆ ಅನ್ನುವುದಷ್ಟೇ ವಾಸ್ತವ.
ಅಂತೂ ಈ ಸ್ಟಾರ್ ಕಲಾವಿದರಿಬ್ಬರೂ ಒಂದಾಗಲಿ ಎಂದು ಅನೇಕ ಅಭಿಮಾನಿಗಳು ಬಯಸುತ್ತಿದ್ದಾರೆ. ತಮ್ಮ ಬಯಕೆಯನ್ನು ಕಾಮೆಂಟ್ಗಳ ಮೂಲಕ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಅವರ ಬಯಕೆ ಈಡೇರುವ ಕಾಲ ಈವರೆಗೂ ಬಂದಿಲ್ಲ.
ಒಟ್ಟಾರೆ ದರ್ಶನ್ ಸುದೀಪ್ ಎಲ್ಲವನ್ನು ಮರೆತು ಮತ್ತೆ ಒಂದಾಗಲಿ ಅಭಿಮಾನಿಗಳ ಆಸೆ ಆದಷ್ಟು ಬೇಗ ಈಡೇರಲಿ ಎಂಬುವುದೇ ನಮ್ಮ ಆಶಯ.