- Advertisement -
Rajastan News:
ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಕಾಲ್ಗೆಜ್ಜೆ ಕದಿಯಲು ಬಂದ ಕಳ್ಳನೊಬ್ಬ ವೃದ್ದೆಯ ಕಾಲನ್ನೇ ಕತ್ತರಿಸಿದ ಘಟನೆ ನಡೆದಿದೆ. “75 ವರ್ಷದ ವೃದ್ದೆ ಉಚ್ಚಾಬಿ ಬಾಯಿ ಸೈನಿ ಮನೆಯಲ್ಲಿ ಒಬ್ಬರೇ ಮಲಗಿದ್ದಾಗ ಇಬ್ಬರು ಕಳ್ಳರು ಕಾಲನ್ನೇ ಕತ್ತರಿಸಿದ ಕಾಲ್ಗೆಜ್ಜೆದೊಂದಿಗೆ ಪರಾರಿಯಾಗಿದ್ದಾರೆ. ಆದರೆ, ಇನ್ನೊಂದು ಕಾಲಿನ ಗೆಜ್ಜೆಯನ್ನು ದೋಚಲು ಸಾಧ್ಯವಾಗಲಿಲ್ಲ” ಎಂದು ನೈನ್ವಾ ಎಸ್ಎಚ್ಒ ಬಾಬುಲಾಲ್ ಮೀನಾ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳು ಮಹಿಳೆಯ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.ವೃದ್ದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೋಟಾದ ಎಂಬಿಎಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.
- Advertisement -