Friday, December 13, 2024

Latest Posts

ಶಾಸಕರನ್ನು 30 ಕೋಟಿ ಕೊಟ್ಟು ಬಿಜೆಪಿ ಖರೀದಿಸಿದೆ- ಕಾಂಗ್ರೆಸ್ ಆರೋಪ

- Advertisement -

ಬೆಂಗಳೂರು: ಬಿಜೆಪಿಯವರು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ದುಡ್ಡಿನ ಆಮಿಷವೊಡ್ಡಿ ತಮ್ಮತ್ತ ಸೆಳೆಯುತ್ತಿದ್ದಾರೆ. 30 ಕೋಟಿ ಕೊಟ್ಟು ಬಿಜೆಪಿ ಶಾಸಕರನ್ನು ಖರೀದಿ ಮಾಡಿದಿ ಅಂತ ಕಾಂಗ್ರೆಸ್ ನ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.

ಮೈತ್ರಿ ಶಾಸಕರನ್ನು ಬಿಜೆಪಿ ದುಡ್ಡುಕೊಟ್ಟು ಖರೀದಿ ಮಾಡಿದೆ. ನೈತಿಕತೆ ಕುರಿತು ಮಾತನಾಡುವ ಬಿಜೆಪಿ ಸದನದಲ್ಲಿ ಈ ಆರೋಪಕ್ಕೆ ಚಕಾರವೆತ್ತದೆ ಸುಮ್ಮನೆ ಕುಳಿತಿರೋದನ್ನು ನೋಡಿದರೇ ಖರೀದಿ ಮಾಡಿರೋದು ತಿಳಿಯುತ್ತದೆ ಅಂತ ಕೃಷ್ಣ ಭೈರೇಗೌಡ ಆರೋಪಿಸಿದ್ರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಶ್ರೀನಿವಾಸಗೌಡ, ನನ್ನ ಮನೆಗೂ ಬಿಜೆಪಿಯವರು ಬಂದು 5 ಕೋಟಿ ಆಫರ್ ನೀಡಿದರು. ನಾನು ಅಂತಹವನಲ್ಲ ಅಂತ ಹೇಳಿದ್ರೂ ಬಲವಂತವಾಗಿ ಹಣವನ್ನು ನನ್ನ ಮನೆಯಲ್ಲಿಟ್ಟು ಹೋಗಿದ್ದಾರೆ ಅಂತ ಆರೋಪಿಸಿದ್ರು. ಇನ್ನು ಈ ಕುರಿತು ಸದನದಲ್ಲಿ ಆಕ್ರೋಶವ್ಯಕ್ತಪಡಿಸಿದ ಕೃಷ್ಣಭೈರೇಗೌಡ, ಈ ಕುರಿತು ಬಿಜೆಪಿ ವಿರುದ್ಥ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದರು. ಈ ವೇಳೆ ಸದನದಲ್ಲಿ ಉಭಯ ಪಕ್ಷಗಳ ಸದಸ್ಯರು ಗದ್ದಲವೆಬ್ಬಿಸಿದ್ರು.

ಇದರಿಂದ ತಾಳ್ಮೆ ಕಳೆದುಕೊಂಡ ಸ್ಪೀಕರ್, ನಿಮ್ಮ ಸ್ವಾರ್ಥಕ್ಕೆ, ಅನುಕೂಲಕ್ಕೆ ಎಲ್ಲಿ ಬೇಕಾದ್ರೂ ತಲುಪುತ್ತೀರಿ. ರಾಜ್ಯದಲ್ಲಿ ಪ್ರಾಮಾಣಿಕರಿರೋದು ನಿಮಗೂ ಬೇಡ, ಇವರಿಗೂ ಬೇಡ. ಹೀಗಿರೋವಾಗ ಪ್ರಾಮಾಣಿಕವಾರಿಗಬೇಕೆನ್ನುವವರು ಎಲ್ಲಿಗೆ ಹೋಗಿ ಸಾಯಬೇಕು ಅಂತ ಕಿಡಿ ಕಾರಿದ್ರು. ಅಲ್ಲದೆ, ಇನ್ನೂ ನಿಮ್ಮ ಮನಸ್ಸಿನಲ್ಲಿರುವ ಗಲೀಜನ್ನು ಹೊರಹಾಕಿ, ಎಲ್ಲವನ್ನೂ ನೋಡುತ್ತಿರುವ ಜನ ಒಮ್ಮೆಗೆ ನಿರ್ಧಾರ ಮಾಡಲಿ. ನೀವು ಮಾನನಷ್ಟ ಪ್ರಕರಣ ಹಾಕಿ ಆಗಿದ್ದಾಗಲಿ ನೋಡೋಣ. ಎಲ್ಲವೂ ಕಡತಕ್ಕೆ ಹೋಗುವದನ್ನು ನಾನು ತಪ್ಪಿಸುವುದಿಲ್ಲ ಅಂತ ಸ್ಪೀಕರ್ ಆಕ್ರೋಶ ಹೊರಹಾಕಿದ್ರು.

- Advertisement -

Latest Posts

Don't Miss