ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

Film News:

ರವಿಚಂದ್ರನ್​ ಪುತ್ರ ಮನೋರಂಜನ್​ ಮದುವೆ ಬಹಳ  ಅದ್ದೂರಿಯಾಗಿ ನೆರವೇರಿತು. ಮದುವೆ  ನಂತರ ರವಿಚಂದ್ರನ್ ಇದ್ದಕ್ಕಿದ್ದಂತೆ  ತನ್ನ ಮನೆಯನ್ನಯಮದುವೆ ಬಳಿಕ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಎಂಬುದು ಮೊದಲೇ ನಿರ್ಧಾರ  ಆಗಿತ್ತು. ‘ಒಮ್ಮೆಲೇ ಅವರನ್ನು ಬೇರೆಡೆಗೆ ಕಳಿಸಿದರೆ ಚೆನ್ನಾಗಿರುವುದಿಲ್ಲ. ಒಂದಷ್ಟು ದಿನ ನಾವೂ ಅವರ ಜೊತೆಯಲ್ಲೇ ಇರೋಣ’ ಎಂಬುದು  ತಂದೆಯಾಗಿ ರವಿಚಂದ್ರನ್​ ಭಾವನೆ. ಆ ಕಾರಣದಿಂದ ಅವರ ಇಡೀ ಕುಟುಂಬ ಮಗ-ಸೊಸೆಯ ಜೊತೆ ಹೊಸ ಮನೆಗೆ ಶಿಫ್ಟ್​ ಆಗಿದ್ದಾರೆ.

ರಾಜಾಜಿನಗರದ ಮನೆ ಬಿಡಬೇಕು ಎಂದು ಬಹಳ ಹಿಂದೆಯೇ ರವಿಚಂದ್ರನ್​ ಅವರು ನಿರ್ಧರಿಸಿದ್ದರು. ಆದರೆ ಅವರ ತಾಯಿ ಪಟ್ಟಮ್ಮಾಳ್​ ಅವರು ಭಾವನಾತ್ಮಕವಾಗಿ ಈ ಜಾಗಕ್ಕೆ ಹೆಚ್ಚು ಕನೆಕ್ಟ್​ ಆಗಿದ್ದರು. ಬೇರೆಡೆಗೆ ತೆರಳುವುದು ತಾಯಿಗೆ ಇಷ್ಟ ಇಲ್ಲ ಎಂಬ ಕಾರಣಕ್ಕೆ ರವಿಚಂದ್ರನ್​ ಅವರು ಮನೆ ಬದಲಿಸುವ ನರ‍್ಧಾರವನ್ನು ಈ ಮೊದಲು ತೆಗೆದುಕೊಂಡಿರಲಿಲ್ಲ. ಈ ರ‍್ಷ ಪಟ್ಟಮ್ಮಾಳ್​ ಇಹಲೋಕ ತ್ಯಜಿಸಿದರು. ಅದಾಗಿ ಹಲವು ತಿಂಗಳು ಕಳೆದ ಬಳಿಕ ರವಿಚಂದ್ರನ್​ ಅವರು ಈ ತೀರ್ಮಾನಕ್ಕೆ ಬಂದರು. ಸದ್ಯ ಅವರ ಕುಟುಂಬ ಹೊಸ ಮನೆಯಲ್ಲಿ ವಾಸವಾಗಿದೆ.

ವಾಸ್ತು ವಿಚಾರದಲ್ಲಿಯೂ ರವಿಚಂದ್ರನ್​ ಅವರಿಗೆ ಕೆಲವೊಂದು ನಂಬಿಕೆ ಇದೆ. ಅದರ ಅನುಗುಣವಾಗಿ ರಾಜಾಜಿನಗರದ ಮನೆಗೆ ಅನೇಕ ಬಾರಿ ಮರ‍್ಪಾಡು ಮಾಡಲಾಗಿತ್ತು. ಸದ್ಯಕ್ಕೆ ಮನೆ ಬದಲಿಸುವುದೇ ಸೂಕ್ತ ಎಂದು ಅವರಿಗೆ ಎನಿಸಿದೆ. ಇನ್ನು, ಸಿನಿಮಾಗಳ ವಿಚಾರದಲ್ಲಿಯೂ ಅವರು ಹೊಸ ರೀತಿಯಲ್ಲಿ ಆಲೋಚಿಸಲು ನರ‍್ಧರಿಸಿದ್ದಾರೆ. ಹೊಸ ಆಲೋಚನೆಗೆ ಹೊಸ ಜಾಗ, ಹೊಸ ವಾತಾವರಣ ಕೂಡ ಮುಖ್ಯ ಎನಿಸಿದ್ದರಿಂದ ಬೇರೆ ಮನೆಗೆ ಶಿಫ್ಟ್​ ಆಗಿದ್ದಾರೆ.

“ಪೂರ್ಣಚಂದ್ರ ಫಿಲಂಸ್” ನಿರ್ಮಾಣದ ಚೊಚ್ಚಲ ಕಾಣಿಕೆ “ಬ್ರಹ್ಮ ಕಮಲ”.

ಜಮೀರ್ ಅಹಮದ್ ಮಗ ಝೈದ್ ಖಾನ್‌ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ..

ಅಮೇಜಾನ್ ಪ್ರೈಮ್ನಲ್ಲಿ ಮಮ್ಮುಟ್ಟಿ ಅಭಿನಯದ ಕನ್ನಡದ ‘ಶೈಲಾಕ್’..

About The Author