National News:
ಐತಿಹಾಸಿಕ ತಾಜ್ ಮಹಲ್ ಸ್ಮಾರಕದ 500 ಮೀಟರ್ ಸುತ್ತಮುತ್ತ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತ್ತು.ಸಮಾಧಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದ್ದು ಮೇ 2000ದಲ್ಲಿ ಇದೇ ರೀತಿಯ ಆದೇಶವನ್ನು ನೀಡಲಾಗಿತ್ತು ಆದರೆ, ಸಮಯದ ದರ‍್ಘಾವಧಿಯ ದೃಷ್ಟಿಯಿಂದ ಆ ನರ‍್ದೇಶನವನ್ನು ಪುನರುಚ್ಚರಿಸುವುದು ಸೂಕ್ತವಾಗಿದೆ ಎಂದು ವಕೀಲ ರಾವ್ ಹೇಳಿದರು. ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ತಾಜ್ ಮಹಲ್ನ ೫೦೦ ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ವಹಿವಾಟು ತೆರವುಗೊಳಿಸಲು ನಿರ್ದೇಶಿಸಿದೆ.
ಹಿರಿಯ ವಕೀಲರ ಮಾತಿಗೆ ಸಮ್ಮತಿಸಿದ ನ್ಯಾಯಪೀಠವು ತಾಜ್‌ಮಹಲ್‌ನ 500 ಮೀಟರ್ ವ್ಯಾಪ್ತಿಯನ್ನು ತಕ್ಷಣವೇ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಂದ ತೆರವುಗೊಳಿಸುವಂತೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ.
“ ದೇವರನಾಡು ಭಯೋತ್ಪಾದಕರ ತಾಣವಾಗಿ ಮಾರ್ಪಾಡಾಗುತ್ತಿದೆ” : ಜೆ.ಪಿ ನಡ್ಡಾ
ಇನ್ನೂ ಮಾಸಿಲ್ಲ ಅಸ್ಪೃಷ್ಯತೆ ಎಂಬ ಅನಾಚಾರ…! ಮಡಿಕೆ ನೀರೇ ದಲಿತನಿಗೆ ವಿಷವಾಯಿತೇ..?!




