Beauty tips:
ನೀವು ಈ ಕೂಡಲೇ ಹಲವಾರು ಮನೆ ಮದ್ದುಗಳನ್ನು ಉಪಯೋಗಿಸಿ ಪ್ರಯೋಜನವಿಲ್ಲದೆ ನಿರಾಸೆ ಹೊಂದಿದ್ದರೆ, ಒಮ್ಮೆ ನಾವು ಹೇಳುವ ಈ ಟಿಪ್ಸ್ಅನ್ನು ಕ್ರಮವಾಗಿ ಅನುಸರಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಹಾಗಾದರೆ ಆ ಟಿಪ್ಸ್ ಯಾವುದು ಎಂದು ತಿಳಿದು ಕೊಳ್ಳೋಣ .
ನಿಮ್ಮ ಕೂದಲು ಉದುರುವಿಕೆಗೆ ಕಾರಣವೇನೆಂದು ಮೊದಲೂ ನೀವು ತಿಳಿದುಕೊಳ್ಳಬೇಕು ,ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೂದಲು ಉದುರುವಿಕೆಗೆ ಕಾರಣ ಮಲಬದ್ಧತೆ ಸಮಸ್ಯೆ ,ಮಾನಸಿಕ ಒತ್ತಡ ,ರಕ್ತದ ಅಶುದ್ಧಿ, ಹಾರ್ಮೋನ್ ಇಂಬ್ಯಾಲೆನ್ಸ್ ಹಾಗೂ ದಿನಚರಿಯ ಆಹಾರ, ನಿದ್ದೆ ,ಈ ಎಲ್ಲವು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೆ ನಿಮ್ಮ ಕೂದಲಿಗೆ ಬೇಕಾದ ಪೋಷ್ಟಿಕಾಂಶ ಸಿಗುವುದಿಲ್ಲ, ಅಂತಹ ಸಂದರ್ಭದಲ್ಲಿ ಕೂದುಲು ಉದುರಲು ಪ್ರಾರಂಭವಾಗುತ್ತದೆ .
ಕೂದುಲು ಉದುರುವಿಕೆಗೆ ಪರಿಹಾರವೇನೆಂದರೆ ನಿಮ್ಮ ದಿನಚರಿಯಲ್ಲಿ ಮೊದಲು ನೀವು ಬದಲಾವಣೆ ಮಾಡಬೇಕು. ಮೊದಲು ನೀವು ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಏಳಬೇಕು. ರಾತ್ರಿ8 ರಿಂದ 9ರ ಒಳಗೆ ಮಲಗಬೇಕು ಹಾಗೂ ಮುಂಜಾನೆ 4ರಿಂದ 5ರ ಒಳಗಡೆ ನಿದ್ದೆ ಎಚ್ಚರ ಗೊಳ್ಳಬೇಕು .ಮುಂಜಾನೆ ಎದ್ದ ಕೂಡಲೇ ಯೋಗ ಅಥವಾ ವಾಕಿಂಗ್, ಪ್ರಾಣಾಯಾಮ ಮಾಡಬೇಕು ಇದನ್ನು ಮಾಡುವುದರಿಂದ ನಮ್ಮ ದೇಹ ಬ್ಯಾಲೆನ್ಸ್ ಆಗುತ್ತದೆ ಹಾಗೂ ದೇಹದಲ್ಲಿನ ಸಮಸ್ಯೆ ಪರಿಹಾರ ವಾಗುತ್ತದೆ .
ಆಹಾರ ಪದಾರ್ಥದಲ್ಲಿ ,frid food, ಆಯಿಲ್ ಫುಡ್ ,ಬೇಕರಿ ಪದಾರ್ಥ ,ಅತಿಯಾದ ಮಾಂಸಾಹಾರ,ಅತಿಯಾದ ಟೀ ,ಕಾಫಿ , ಧೂಮಪಾನ ಮದ್ಯಪಾನ ,ಈ ಎಲ್ಲವನ್ನು ಬಿಡಬೇಕು ಹಗೂ ಆಹಾರದಲ್ಲಿ ,ಮಸಾಲೆ ,ಕಾರ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು .ಬಹಳ ಮುಖ್ಯವಾಗಿ ನಮ್ಮ ಋತುಚರಿಯಲ್ಲಿ ಯಾವ ಪದ್ದತಿ ಅನುಸರಿಸಬೇಕು ಎನ್ನುವುದು ತಿಳಿದು ಕೊಳ್ಳಬೇಕು .ಅಂದರೆ ,ಬೇಸಿಗೆಕಾಲದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ,ಮಳೆಗಾಲದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಮತ್ತು ಚಳಿಗಾಲದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು .
ಬೇಸಿಗೆಯಲ್ಲಿ ಹೆಚ್ಚು ತಂಪಾಗಿ ಇರುವಂತಹ ಪದಾರ್ಥಗಳನ್ನು ಸೇವಿಸಬೇಕು ,ಎಳೆನೀರು ,ಜ್ಯೂಸು ,ಹೀಗೆ ನಿಮ್ಮ ದೇಹ ತಂಪಾಗಿ ಇರುವ ಹಾಗೆ ನೋಡಿಕೊಳ್ಳಬೇಕು .ಮಳೆಗಾಲದಲ್ಲಿ ಶೀತವನ್ನು ಬ್ಯಾಲೆನ್ಸ್ ಮಾಡುವ ಆಹಾರವನ್ನು ತೆಗೆದು ಕೊಳ್ಳಬೇಕು ,ಮುಖ್ಯವಾಗಿ ಜೇನುತುಪ್ಪವನ್ನು ನಿಂಬೆಹಣ್ಣಿನ ರಸವನ್ನು ಮಿಶ್ರಣಮಾಡಿ ತೆಗೆದುಕೊಳ್ಳಬೇಕು .ಚಳಿಗಾಲದಲ್ಲಿ ಅಬ್ಯಾಂಗ ಸ್ನಾನ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ರಾತ್ರಿ ಮಲಗುವ ಮುನ್ನ ಬಿಸಿನೀರಿನಲ್ಲಿ ಒಂದು ಸ್ಪೂನ್ ತುಪ್ಪ ಅಥವಾ ,ಕೊಬ್ಬರಿ ಎಣ್ಣೆಯನ್ನು ಸೇವನೆ ಮಾಡಬೇಕು. ಇದರಿಂದ ನಿಮ್ಮ ಕರಳು ಶುದ್ಧಿಯಾಗುತ್ತದೆ.ಈ ಎಲ್ಲ ಕಾರಣಗಳಿಗೂ ಮೂಲ ಪರಿಹಾರ ಹೊಟ್ಟೆ ಶುದ್ದೀಕರಣ, ಋತುಚರಿ ,ದಿನಚರಿಯ ಪರಿವರ್ಥನೆಗಳಲ್ಲಿ ಇದನ್ನು ನಾವು ಕ್ರಮವಾಗಿ ಅನುಸರಿಸಿದರೆ ಕೂದಲು ಉದುರುವಿಕೆಯ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ .
ಇದರ ಜೊತೆಗೆ ನಾವು ಹೇಳುವ ಹೇರ್ ಪ್ಯಾಕ್ ಅನುಸರಿಸಬೇಕು.
ಪ್ರತಿದಿನ ರಾತ್ರಿ ನಿಮ್ಮ ಕೂದಲಿಗೆ ನಾವು ಹೇಳುವ ಎಣ್ಣೆಯನ್ನು ಹಚ್ಚಾಬೇಕು. ಶುದ್ದ ಕೊಬರಿ ಎಣ್ಣೆಯನ್ನು ತೆಗೆದುಕೊಂಡು, ಅದರಲ್ಲಿ ಬೆಟ್ಟದ ನೆಲ್ಲಿಕಾಯಿಯಾರಸ 250ಗ್ರಾಂ, ದಾಸವಾಳದ ಹೂ ಹಾಗೂ ಎಲೆಯ ರಸ 250ಗ್ರಾಂ ,ಅಲೋವೆರಾದ ಒಳಗಡೆ ಇರುವ ವೈಟ್ ಭಾಗ 250ಗ್ರಾಂ ,ಕರಿಬೇವಿನ ರಸ250ಗ್ರಾಂ ,ತೆಗೆದುಕೊಂಡು ಶುದ್ಧವಾದ ಕೊಬರಿ ಎಣ್ಣೆಯನ್ನು 1ಲೀಟರ್ ತೆಗೆದುಕೊಂಡು ಈ ಎಲ್ಲ ರಸವನ್ನು ಕೊಬರಿ ಎಣ್ಣೆಗೆ ಮಿಕ್ಸ್ ಮಾಡಿ ಕೊಬ್ಬರಿ ಎಣ್ಣೆಯಲ್ಲಿರುವಂತಹ ನೀರಿನಂಶವೆಲ್ಲ ಹೋಗುವವರೆಗೂ ಎಣ್ಣೆಯನ್ನು ಕುದಿಸಬೇಕು. ನಂತರ ರಾತ್ರಿ ಮಲಗುವ ಮುಂಚೆ ತಲೆಗೆ ಎಣ್ಣೆಯನ್ನು ಅಚ್ಚಿ ಕೊಂಡು ಬೆಳಗ್ಗೆ ಸೀಗೆಕಾಯಿ ಪುಡಿಯಿಂದ ನಿಮ್ಮ ಕೂದಲನ್ನು ತೊಳೆಯಬೇಕು .ಹೀಗೆ ಪ್ರತಿ ದಿನ ಮಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ .
ನಂತರ ವಾರಕ್ಕೆ ಒಂದುಬಾರಿ ಬೆಟ್ಟದ ನಲ್ಲಿಕಾಯಿ ಹಾಗು ದಾಸವಾಳದ ಹೂವಿನಿಂದ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಬೇಕು, 1ಗಂಟೆಯ ಬಳಿಕ ಸೀಗೆಕಾಯಿ ಪುಡಿಯಿಂದ ನಿಮ್ಮ ಕೂದಲನ್ನು ತೊಳೆಯಬೇಕು. ಅತಿಯಾದ ಬಿಸಿನೀರಿನಿಂದ ತಲೆ ಸ್ನಾನ ಮಾಡಬಾರದು . ಮೇಲೆ ಹೇಳಿರುವ ಎಲ್ಲ ಟಿಪ್ಸ್ ಗಳನ್ನೂ ಅನುಸರಿಸಿ.
ಹಾಗೂ ಎಲ್ಲದಕ್ಕೂ ಮೂಲ ನಮ್ಮ ಹೊಟ್ಟೆ ಆದಕಾರಣ ಮೊದಲು ನಮ್ಮ ಹೊಟ್ಟೆಯನ್ನು ನಾವು ಶುಚಿಯಾಗಿ ಇಟ್ಟು ಕೊಳ್ಳಬೇಕು.
ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!