Friday, November 22, 2024

Latest Posts

BPಗೆ ಇಲ್ಲಿದೆ ಮನೆ ಮದ್ದು….!

- Advertisement -

Health tips:

ಬಿಪಿ ಬರುವುದಕ್ಕೆ ಮೊದಲ ಕಾರಣವೆಂದರೆ ಅದು ನಮ್ಮ ಆಹಾರ ಶೈಲಿ ಸರಿಯಾಗಿ ಇಲ್ಲದೆ ಇರುವುದು ಹಾಗು ಹೆರಿಡಿಟಿ ಎನ್ನಬಹುದು ,ಈಗಿನ ದಿನಗಲ್ಲಿ ಬಿಪಿ ಸರ್ವೇ ಸಾಮಾನ್ಯ ಚಿಕ್ಕ ಸ್ಸಿನಿಂದ ಹಿಡಿದು ದೊಡ್ಡ ವಯಸ್ಸಿನವರಿಗೆ ಬರುವಂತಹ ಸಮಸ್ಯೆಯಾಗಿದೆ .ಹಾಗಾದರೆ ಸಮಸ್ಯೆಗೆ ಕಾರಣವೇನೆಂದರೆ ಕೆಲವರ ಪ್ರಕಾರ ಗರ್ಭಿಣಿಯಲ್ಲಿ ತಾಯಿಯೂ ತಮ್ಮ ಜೀವ ಶೈಲಿಯಲ್ಲಿ ಮಾಡುವ ತಪ್ಪುಗಳು ಎನ್ನಬಹುದು, ಹೇಗೆಂದರೆ ಗರ್ಭಿಣಿಯಾಗಿದ್ದಾಗ ತಾಯಿಯು ಬೇಡದ ಆಹಾರವನ್ನು ತೆಗೆದುಕೊಳ್ಳುವುದು , ಜನ್ಕಫುಡ್ ,ಫ್ರಯ್ಡ್ ಫುಡ್ ತಿನ್ನುವುದು ಇನ್ನು ಕೆಲವರು ಸ್ಮೋಕ್ ಹಾಗು ಡ್ರಿಂಕ್ಸ್ ಮಾಡುತ್ತಾರೆ ಇದರಿಂದ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ತೊಂದರೆ ಉಂಟಾಗುತ್ತದೆ .ಹಾಗು ಮಗು ಭೂಮಿಮೇಲೆ ಬಂದಮೇಲೂ ಅವರ ಜೀವನದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ .ಆದಕಾರಣ ಇಂತಹ ಸಮಯದಲ್ಲಿ ಸರಿಯಾದ ಆಹಾರ ತೆಗೆದು ಕೊಳ್ಳುವುದು ಮುಖ್ಯವಾಗಿರುತ್ತದೆ .

ಹಾಗು ನಮ್ಮ ದಿನಚರಿಯ ಹಾಗು ಋತುಚರಿಯಿಂ ಬಿಪಿ ಬರುವ ಸದತ್ಯೆ ಹೆಚ್ಚಾಗಿರುತ್ತದೆ ,
ಆಹಾರವನ್ನು ಕ್ರಮಬದ್ಧವಾಗಿ ಸೇವೆನೆ ಮಾಡದೇ ದೇಹಕ್ಕೆ ವಿರುದ್ಧವಾದ ಆಹಾರವನ್ನು ಸೇವನೆ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತದೆ ಹಾಗು ಯಾರಿಗೆ ಮಾನಸಿಕ ಒತ್ತಡಗಳು ಜಾಸ್ತಿ ಇರುತ್ತದೋ ಅವರ ಶರೀರದಲ್ಲಿ ಉಸಿರಾಟದ ವ್ಯಸ್ಥೆಗಳು ವೇಗವಾಗುತ್ತದೆ , ಉಸಿರಾಟದ ವ್ಯವಸ್ಥೆ ವೇಗವಾದರೆ ಹೆಚ್ಚು ಫ್ಯಾಟ್ ಶರೀರದಲ್ಲಿ ಡೆಪಾಸಿಟ್ ಹಾಗಿ ಅದು ರಕ್ತ ನಾಳಗಳಲ್ಲಿ ಬ್ಲಾಕ್ ಹಾಗಿ ಬಿಪಿ ಬರುವುದಕ್ಕೆ ಕಾರಣವಾಗುತ್ತದೆ ಆದ ಕಾರಣ ನಮ್ಮ ಉಸಿರಾಟ ದೀರ್ಘವಾಗಿರಬೇಕು .ಮೊದಲನೆಯದಾಗಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದೇ ಇರುವುದು ಹಾಗು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದ ಬಿಪಿ ಹೆಚ್ಚಾಗುತ್ತದೆ ಹಾಗು UNHEALTHY ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚು ಉತ್ಪತ್ತಿಯಾಗಿ ನರಗಳಲ್ಲಿ ಶೇಖರಣೆ ಯಾಗುತ್ತದೆ ನಂತರ ರಕ್ತ ನಾಳಗಲ್ಲಿ ಕೊಬ್ಬು ಜಾಸ್ತಿ ಅದಾಗ ರಕ್ತ ಸಂಚರಿಸಲು ಜಾಗ ಕಡಿಮೆ ಯಾಗುತ್ತದೆ, ರಕ್ತದ ವೇಗ ಜಾಸ್ತಿ ಯಾಗುತ್ತದೆ ಇದನ್ನು ಬ್ಲಡ್ ಪ್ರೆಷರ್ ಎಂದು ಕರೆಯುತ್ತಾರೆ ಇದರಿಂದ ಹೃದಯಾಘಾತ ಆಗುವ ಅವಕಾಶಗಳು ಜಾಸ್ತಿ ಇರುತ್ತದೆ .

ಬಿಪಿ ಇದ್ದರೆ ಮನುಷ್ಯನ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡು ಬರುತ್ತದೆ ಎನ್ನುವುದನ್ನು ತಿಳಿದು ಕೊಳ್ಳೋಣ ಬನ್ನಿ .
ಬಿಪಿ ಇದ್ದರೆ ಸಾಮಾನ್ಯವಾಗಿ ತಲೆ ತಿರುಗುತ್ತದೆ ,ಬಾಯಿ ಗು ಗಂಟಲು ಒಣಗುವಂತೆ ಗುವುದು ಸುಸ್ತುಹಾಗುವುದು ,ಕೆಲವರಲ್ಲಿ ಅತಿಯಾದ ಬಾಯಾರಿಕೆಯಾಗುವುದು ,ನಿದ್ದೆ ಬಾರದೇ ಇರುವುದು ,ಕೈಕಾಲು ಜೋಮು ಬರುವುದು ,ತಲೆ,ಕೈ ಕಾಲು ಭಾರ ಅನಿಸುವುದು , ಲಕ್ಷಣಗಳು ಕಂಡು ಬಂದರೆ ನೀವು ತಕ್ಷಣ ವೈದ್ಯರ ಬಳಿ ಬಂದು ಸೂಕ್ತ ಚಿಕಿತ್ಸೆ ಪಡೆಯಬೇಕು .

ಬಿಪಿಗೆ ಮನೆಯಲ್ಲೇ ಪರಿಹಾರ ಮಾಡಬೇಕಾದರೆ ೨೧ದಿನಸತತವಾಗಿ ಹಸಿ ತರಕಾರಿ ,ಮೊಳಕೆಕಾಳು ,ಸೊಪ್ಪು ,ಹಣ್ಣುಗಳು ತಿನ್ನಬೇಕು ,ಆಲೂಗಡ್ಡೆ ,ಬದನೇಕಾಯಿ ಬಿಟ್ಟು ಎಲ್ಲ ,ವೆಜಿಟೇಬಲ್ಸ್ ಸೇವನೆ ಮಾಡಬೇಕು , ಬಾಳೆ ಹಣ್ಣನ್ನು ಮತ್ತು ಸೀಬೆ ಹಣ್ಣನು ಬಿಟ್ಟು ಎಲ್ಲ ಫ್ರೂಟ್ಸ್ ಅನ್ನು ಸೇವನೆ ಮಾಡಬಹುದು ,ಯಾವುದೇ ಕಾರಣಕ್ಕೂ ಅತಿಯಾದ ಟಿ, ಕಾಫಿ, ಬೇಕರಿ ಪದಾರ್ಥ ,ಅತಿಯಾದ ಮಾಂಸಾಹಾರ ,ತಿನ್ನುವುದನ್ನು ಬಿಡಬೇಕು ಯೋಗ ಪ್ರಾಣಾಯಾಮ ವಾಕಿಂಗ್ ನಿರಂತರ ಮಾಡುತ್ತಿರಬೇಕು ,ಹಾಗು ಅತಿಯಾದ ಯೋಚನೆ ಮಾಡುವುದನ್ನು ಬಿಡಬೇಕು ಇದನ್ನು ಅನುಸರಿಸಿದರೆ ಖಂಡಿತ ಬಿಪಿ ನೈಸರ್ಗಿಕವಾಗಿ ನಿಯಂತ್ರಣಕ್ಕೆ ಬರುತ್ತದೆ .

PCOD / PCOS ಸಿಂಟಮ್ಸ್ :

ಕಣ್ಣುಗಳ ಅರೋಗ್ಯದ ರಹಸ್ಯ ….!

ಚಳಿಗಾಲ ಬಂತು ಹುಷಾರ್..! ಇನ್ನು ಇದನ್ನು ತಿನ್ನುವುದನ್ನು ಕಡಿಮೆ ಮಾಡಿ…!

 

- Advertisement -

Latest Posts

Don't Miss