ಮಳವಳ್ಳಿ: ನಾಲ್ಕು ದಿನಗಳ ಹಿಂದೆ ಇಲ್ಲಿನ ಟ್ಯೂಷನ್ ಕೇಂದ್ರ ವೊಂದರಲ್ಲಿ ನಡೆದ ಅತ್ಯಾಚಾರಕ್ಕೆ ಬಲಿಯಾದ ನತದೃಷ್ಟ ಬಾಲಕಿಯ ಮನೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಶುಕ್ರವಾರ ಭೇಟಿ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೂಡ ಇದ್ದರು.
ಈ ಸಂದರ್ಭದಲ್ಲಿ ಸಚಿವರಿಬ್ಬರೂ ಮೃತ ಬಾಲಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ರಾಮನಾಮ ಜಪದಿಂದ ಆಗುವ ಪ್ರಯೋಜನವೇನು..?
ಬಳಿಕ ಮಾತನಾಡಿದ ಅಶ್ವತ್ಥ ನಾರಾಯಣ, “ಮಳವಳ್ಳಿಯಲ್ಲಿ ನಡೆದಿರುವ ಘಟನೆ ಖಂಡನೀಯ. ಈಗಾಗಲೇ ಆರೋಪಿಯ ತ್ವರಿತ ವಿಚಾರಣೆ ನಡೆಸಿ, ತಕ್ಕ ಶಿಕ್ಷೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ’ ಎಂದರು.
ಸಮಾಜ ಬಹುಮಟ್ಟಿಗೆ ಆರೋಗ್ಯಕರವಾಗಿದೆ. ಆದರೂ ಒಮ್ಮೊಮ್ಮೆ ಇಂತಹ ಘಟನೆಗಳು ನಡೆದು ಬಿಡುತ್ತವೆ. ಇದು ವಿಷಾದಕರ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಇಂಥ ಜಾಗಗಳಲ್ಲಿ ಉಳಿಯಲೇಬೇಡಿ.. ಉಳಿದರೆ ಎಂದಿಗೂ ಉದ್ಧಾರವಾಗುವುದಿಲ್ಲ..
ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು.