ಮಕ್ಕಳ ರಕ್ಷಣೆಯ ಬಗ್ಗೆ ಜಾಗೃತಿ ಅಭಿಯಾನ ನಡೆಸಿ: ಡಾ: ಜಯಶ್ರೀ

ಮಕ್ಕಳ ರಕ್ಷಣೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ರಕ್ಷಣೆ ಕುರಿತಂತೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಜಯಶ್ರೀ ಅವರು ತಿಳಿಸಿದರು.

ಅವರು‌ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಕ್ಕಳು ವಿದ್ಯಾಭ್ಯಾಸ ಹಾಗೂ ಇನ್ನಿತರ ತರಬೇತಿಗೆ ಹೋಗುವ ಸ್ಥಳಗಳಲ್ಲಿ ಸಂಪೂರ್ಣ ರಕ್ಷಣೆ ದೊರೆಯಬೇಕು. ಈ ಹಿನ್ನಲೆಯಲ್ಲಿ‌ ಸೂಕ್ತ ಪರಿಶೀಲನೆ ನಡೆಸಿ ನಂತರ ಕೋಚಿಂಗ್ ಅಥವಾ ಟುಟೋರಿಯಲ್ ಸೆಂಟರ್ ಗಳಿಗೆ ಅನುಮತಿ ನೀಡಿ ಎಂದರು.

ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಅಥವಾ ಟುಟೋರಿಯಲ್ ಸೆಂಟರ್ ವಿರುದ್ಧ ದೂರು ದಾಖಲಿಸಿ. ಪೋಷಕರಿಗೆ ಅನಧಿಕೃತ ಕೋಚಿಂಗ್ ಸೆಂಟರ್ ಗಳಿಗೆ ಮಕ್ಕಳನ್ನು ದಾಖಲಿಸದಂತೆ ಜಾಗೃತಿ ಮೂಡಿಸಿ ಎಂದರು.

ಸುಳ್ಳು ದಾಖಲೆ ಸೃಷ್ಟಿಸಿ ಪ್ರವಾಸ ಯತ್ನ: ಆರೋಪಿಗಳು ಪೊಲೀಸರ ವಶಕ್ಕೆ..

ತಂಗಳಕೆರೆ ವಸತಿ ಶಾಲೆಯಿಂದ ಕಾಣೆಯಾಗಿರುವ ಬಾಲಕ ಇನ್ನೂ ಪತ್ತೆಯಾಗಿರುವುದಿಲ್ಲ. ಸದರಿ‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕನನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ತಿಳಿಸಿದರು.

ಮಕ್ಕಳ ಮನಸ್ಸು ಬಹಳ ಸೂಕ್ಷವಾಗಿರುತ್ತದೆ. ವಸತಿ ಶಾಲೆಯಲ್ಲಿ ಮಕ್ಕಳು ಪೋಷಕರಿಂದ ದೂರವಿರುತ್ತಾರೆ. ಅವರಿಗೆ ಸಮಾಲೋಚನಾ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ನಡೆಸಿ. ಪೋಷಕರೊಂದಿಗೆ ವಸತಿ ಶಾಲೆಯ ಶಿಕ್ಷಕರು ಸಂಪರ್ಕದಲ್ಲಿದ್ದು, ಮಗುವಿನ ಬೆಳವಣಿಗೆ ಬಗ್ಗೆ  ಚರ್ಚಿಸಿ ಎಂದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಇಂತಹ ಮಕ್ಕಳ ಪೋಷಕರಿಗೆ ಅರಿವು ಮೂಡಿಸಿ ಅವರನ್ನು ಶಾಲೆಗೆ ಕರೆತನ್ನಿ ಎಂದು ಸಲಹೆ ನೀಡಿದರು.

ಬನವಾಸೆ ರಂಗಸ್ವಾಮಿಯಿಂದ ಉಚಿತ ಆಟೋ ಸೇವೆಗೆ ಚಾಲನೆ

ಜಿಲ್ಲೆಯಲ್ಲಿ ‌1969 ಅಪೌಷ್ಟಿಕ ಮಕ್ಕಳು, 112 ತೀವ್ರತರ ಅಪೌಷ್ಟಿಕ ಮಕ್ಕಳು ಇದ್ದು, ಅವರಿಗೆ ಸರ್ಕಾರದಿಂದ ನೀಡಲಾಗಿರುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಭೀರ್ಣಿಯರ ವಿವರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ ಅವರು ಸಭೆಗೆ  ಮಾಹಿತಿ ನೀಡಿದರು.

ಮಾಹಿತಿ‌ ಪಡೆದ ಆಯೋಗದ ಅಧ್ಯಕರು ಬಾಲ್ಯ ವಿವಾಹ ಪ್ರಕರಣಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ತಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು‌ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್.ಹುಲ್ಮನಿ, ಡಿ.ಒ. ಎಸ್ ಪಿ ವೇಣುಗೋಪಾಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಉಪಸ್ಥಿತರಿದ್ದರು.

ಸಂಸದೆ ಸುಮಲತಾ ಎದುರೇ ಧಿಕ್ಕಾರ ಕೂಗಿದ ಜನರು..

ಮಕ್ಕಳ ಹಕ್ಕುಗಳು  ಉಲ್ಲಂಘನೆಯಾಗದ ರೀತಿ ಕಾರ್ಯನಿರ್ವಹಿಸೋಣ: ಡಾ.ಜಯಶ್ರೀ

ಮಳವಳ್ಳಿಯಲ್ಲಿ ಆದಂತಹ ಭೀಕರ ಘಟನೆ ಕುರಿತು ಸಿ.ಡಿ.ಪಿ ಒ ಅವರಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಬಾಲಕಿಯನ್ನು ಬಹಳ ಹೀನಾಯವಾಗಿ ಹತ್ಯೆ ಮಾಡಿದ್ದಾರೆ. ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು, ಮಕ್ಕಳ ಹಕ್ಕುಗಳು  ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸೋಣ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಜಯಶ್ರೀ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಮುನ್ನ ಮಾಧ್ಯಮ ಪ್ರತನಿಧಿಗಳೊಂದಿಗೆ  ಮಾತನಾಡಿ ಮಳವಳ್ಳಿಯಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇಡೀ ಸಮಾಜವೇ ತಲೆ ತಗ್ಗಿಸುವಂತಹ ವಿಷಯವಾಗಿದೆ.  ಫೋಕ್ಸೋ ಕಾಯ್ದೆ  ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಹೆಚ್ಚಿನ ಜಾಗೃತಿ ನಡೆಸಬೇಕು ಎಂದು ಹೇಳಿದರು.

ಸಾವಯವ ಸಿರಿ ಯೋಜನೆಯಡಿ ರೈತರಿಗೆ ತರಬೇತಿ: ಹೆಸರು ನೊಂದಾಯಿಸಿಕೊಳ್ಳಿ.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ  ಈ ರೀತಿಯ ಘಟನೆಗಳು ನಡೆಯದೆ ಇರುವ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಇನ್ನಷ್ಟು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು  ಮಾಡೋಣ ಎಂದು ತಿಳಿಸಿದರು.

ಮೃತಪಟ್ಟ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಬಾಲಕಿಯ ಸಹೋದರನಿಗೆ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಲು ಚರ್ಚಿಸುತ್ತೇವೆ  ಎಂದು ಹೇಳಿದರು. ಮಕ್ಕಳಿಗೆ ತೊಂದರೆ ಉಂಟಾಗುವ ಯಾವುದೇ ಘಟನೆಗಳು ಸಂಭವಿಸಿದರೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಕ್ಷ್ಮವಾಗಿ ಪರಿಗಣಿಸುತ್ತದೆ. ಮಕ್ಕಳ ಹಕ್ಕುಗಳು ಯಾವುದೇ ರೀತಿ ಉಲ್ಲಂಘನೆಯಾಗಬಾರದು ಎಂಬುದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಉದ್ದೇಶವಾಗಿದೆ ಎಂದರು.

ಸುಂದರ ಶೀರ್ಷಿಕೆಯ “ಕೌಸಲ್ಯಾ ಸುಪ್ರಜಾ ರಾಮ” ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ..

ಈ ಹಿನ್ನೆಲೆ ಮುಖ್ಯಮಂತ್ರಿಗಳು ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಗಳನ್ನು ನೀಡುವಂತೆ ಘೋಷಣೆ ಮಾಡಿದ್ದಾರೆ ಎಂದರು. ಪೋಕ್ಸೋ ಕಾಯಿದೆಯಡಿ ಆದಷ್ಟು ಬೇಗ ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್.ಹುಲ್ಮನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author