Thursday, October 17, 2024

Latest Posts

ಸಾವಯವ ಸಿರಿ ಯೋಜನೆಯಡಿ ರೈತರಿಗೆ ತರಬೇತಿ: ಹೆಸರು ನೊಂದಾಯಿಸಿಕೊಳ್ಳಿ.

- Advertisement -

ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಸಾವಯವ ಕೃಷಿಯನ್ನು ಉತ್ತೇಜಿಸಿ ಸಾವಯವ ಉತ್ಪನ್ನಗಳನ್ನು ಹಾಗೂ ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಮಾರಾಟ ಮಾಡುವುದರ ಮೂಲಕ ರೈತರಿಗೆ ಗರಿಷ್ಠ ಬೆಲೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು “ ಸಾವಯವ ಸಿರಿ “ ಯೋಜನೆಯನ್ನು ಅನುಷ್ಟಾನಗೊಳಿಸಲು ಉದ್ದೇಶಿಸಿರುತ್ತದೆ.

ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಯೋಜನೆಯ ಅನುಷ್ಟಾನ ಮಾಡಲು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಆಯ್ಕೆಯಾಗಿರುತ್ತದೆ.

ಸುಳ್ಳು ದಾಖಲೆ ಸೃಷ್ಟಿಸಿ ಪ್ರವಾಸ ಯತ್ನ: ಆರೋಪಿಗಳು ಪೊಲೀಸರ ವಶಕ್ಕೆ..

ಸದರಿ ಸಂಸ್ಥೆಯ ವತಿಯಿಂದ ಹೊಸದಾಗಿ ಸಾವಯವ ಕೃಷಿ/ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಂಡ್ಯ ಜಿಲ್ಲೆಯ 200 ರೈತರಿಗೆ ಜಿಲ್ಲಾಮಟ್ಟದಲ್ಲಿ “ಸಾವಯವ ಕೃಷಿ” ಕುರಿತು  ದಿನಾಂಕ: 27.10.2022ರಿಂದ 28.10.2022ರವರೆಗೆ ಎರಡು ದಿನಗಳ ಸಾಂಸ್ಥಿಕ ತರಬೇತಿಯನ್ನು ಶಿವಶಕ್ತಿ ಸಮುದಾಯ ಭವನ, ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು ಇಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುತ್ತದೆ.

ಯುವಕ ರೈತರು/ ಮಹಿಳೆಯರು, ಸಾವಯವ ಕೃಷಿ/ ನೈಸರ್ಗಿಕ ಕೃಷಿಯಲ್ಲಿ ತರಬೇತಿ ಪಡೆಯದೇ ಇರುವ ಆಸಕ್ತ ರೈತರಿಗೆ ಆದ್ಯತೆ ನೀಡಲಾಗುವುದು. ಸದರಿ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸಿರುವ ಮಂಡ್ಯ ಜಿಲ್ಲೆಯ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ದಿನಾಂಕ: 21.10.2022ರಂದು ಸಾಯಂಕಾಲ 5.00 ಗಂಟೆಯ ಒಳಗಾಗಿ ಆರ್.ಟಿ.ಸಿ., ಮತ್ತು ಆಧಾರ್ ಪ್ರತಿಯನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ  ಜಿ ಜಂಟಿ ಕೃಷಿ ನಿರ್ದೇಶಕರಾದ    ಅಶೋಕ.ವಿ.ಎಸ್. ರವರು ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

- Advertisement -

Latest Posts

Don't Miss