ಹಾಸನ: ಹಾಸನಾಂಬೆ ದೇವಿ ದರ್ಶನೋತ್ಸವ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ವೃದ್ಧರಿಗೆ, ಅಂಗವಿಕಲರಿಗೆ, ವಿಕಲಚೇತನರಿಗೆ ಹಾಗೂ ಭಕ್ತರ ಹಿತಾದೃಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಅವರು ಇಂದಿನಿಂದ ಉಚಿತ ಪ್ರಯಾಣ ಮಾಡುವ ಆರು ಆಟೋಗಳ ವ್ಯವಸ್ಥೆಯನ್ನು ಪಕ್ಷದವತಿಯಿಂದ ಚಾಲನೆ ಕೊಡಲಾಯಿತು.
ನಂತರ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನದ ಭಾಗ್ಯ ಕಲ್ಪಿಸಲಾಗಿದ್ದು, ಈ ವೇಳೆ ಹಿರಿಯರಿಗೆ ಮತ್ತು ಅಂಗವಿಕಲರಿಗೆ ಸಣ್ಣ ಸಹಾಯ ಮಾಡುವ ನಿಟ್ಟಿನಲ್ಲಿ ಇಂದಿನಿಂದ ಆರು ಆಟೋಗಳನ್ನು ಕಾಂಗ್ರೆಸ್ ಪಕ್ಷದವತಿಯಿಂದ ಉಚಿತ ಸೇವೆಯನ್ನು ಕೊಡುಗೆಯಾಗಿ ಕೊಡಲಾಗಿದೆ. ಈ ಆಟೋಗಳಲ್ಲಿ ಭಕ್ತಾಧಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.
ಜಿಲ್ಲೆಯ 6 ಶಾಸಕರಿಗೂ ಸವಾಲು ಹಾಕಿದ ಸಂಸದೆ ಸುಮಲತಾ ಅಂಬರೀಶ್..
ಆರು ಆಟೋಗಳು ಹಾಸನ ನಗರಾಧ್ಯಂತ ಸಂಚರಿಸಲಿದ್ದು, ವೃದ್ಧರು, ಅಂಗವಿಕಲರು, ವಿಕಲಚೇತನರು ಉಚಿತ ಆಟೋಗಳಲ್ಲಿ ಸಂಚರಿಸಿ ಹಾಸನಾಂಬ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು. ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ರವಿ, ನಾಗರಾಜು ಇತರರು ಉಪಸ್ಥಿತರಿದ್ದರು.