ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಹೇಳಿದ್ದೇನು..?

ಹಾಸನ : ಹಾಸನಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.  ಅ.30 ಗುಲ್ಬರ್ಗಾದಲ್ಲಿ ಹಿಂದುಳಿದ ವರ್ಗದ ದೊಡ್ಡ ಸಮಾವೇಶ ನಡೆಯುತ್ತಿದೆ. ಅನೇಕ ವರ್ಷಗಳಿಂದ ಕಾಂಗ್ರೆಸ್ ಘೋಷಣೆ ಹಿಂದುಳಿದ ವರ್ಗದ ಪರ ಇದ್ದೇವೆ ಅಂತ ಮತ‌ ಕೇಳಿದ್ದಾರೆ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಏನೇನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬುದಕ್ಕೆ ಬಹಿರಂಗ ಮಾಡಲಿ ಎಂದು ಈಶ್ವರಪ್ಪ ಕಾಂಗ್ರೆಸ್‌ನವರಿಗೆ ಸವಾಲ್ ಹಾಕಿದ್ದಾರೆ.

ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ ಇಲ್ಲಿ ನಡೆಯುತ್ತೆ ವಿಶೇಷ ಪೂಜೆ..

ಅಲ್ಲದೇ, ಮೋದಿ ಎಂಟು ವರ್ಷದಲ್ಲಿ ಏನೇನ್ ಮಾಡಿದ್ದಾರೆ ಅಂತ ನಾವು ಹೇಳ್ತಿವಿ. ಕಾಂಗ್ರೆಸ್‌ನವರು ಬರೀ ಘೋಷಣೆ ಮಾಡ್ತಿದ್ದಾರೆ. ಎಸ್ಪಿಎಸ್ಟಿ ಸ್ವಾತಂತ್ರ್ಯ ಬಂದಾಗಿನಿಂದ ಹೇಳುತ್ತ ಬಂದರು. ಅಂಬೇಡ್ಕರ್ ಅವರಿಗೆ ಹಿಂದುಳಿದವರನ್ನು ಮೇಲೆ‌ ತರಬೇಕೆಂದ ಅಪೇಕ್ಷೆಯಿತ್ತು. ಅದನ್ನು ಭಾರತೀಯ ಜನತಾಪಾರ್ಟಿ ಮಾಡಿದೆ ಎಂದು ಬಿಜೆಪಿ ಪರ ಈಶ್ವರಪ್ಪ ಬ್ಯಾಟ್ ಬೀಸಿದ್ದಾರೆ.

ಇನ್ನು ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗುತ್ತೆ, ಸಿಎಂ ಬಸವರಾಜ ಬೊಮ್ಮಯಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, ಮುಖ್ಯಮಂತ್ರಿಗಳಿಗೆ ಗೊತ್ತು, ಕೇಂದ್ರ ನಾಯಕರ ಜೊತೆ ಚರ್ಚೆ ಮಾಡ್ತಾರೆ. ಯಾರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ತೀರ್ಮಾನ ಮಾಡ್ತಾರೆ, ಅದಕ್ಕೆ ನಾವೆಲ್ಲರೂ ಬದ್ಧ ಎಂದು ಈಶ್ವರಪ್ಪ ಹೇಳಿದ್ದಾರೆ.

ಎಂಎಲ್‌ಎ ಆಗಲು ಉಮಾಪತಿ ಗೌಡ ಸಿದ್ಧತೆ.. ಡಿ ಬಾಸ್ ಬೆಂಬಲ ಯಾರಿಗೆ..?

ಅಲ್ಲದೇ, ನಾನು ಸಚಿವ ಸ್ಥಾನದ ಆಕಾಂಕ್ಷಿ ಹೌದು, ಆದರೆ ತೀರ್ಮಾನ ಮಾಡೋದು ಕೇಂದ್ರದ‌ ನಾಯಕರು, ಮುಖ್ಯಮಂತ್ರಿಗಳು. ಸಚಿವ ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಷಡ್ಯಂತ್ರ ಮಾಡಿ ನನ್ನ ಮೇಲೆ ಕೇಸ್ ಹಾಕ್ಸಿದ್ದಾರೆ ಅಂತ ಇಡಿ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಗೊತ್ತು. ಆ ಕೇಸ್‌ನಿಂದ ಮುಕ್ತರಾಗಿ ಬರಲಿ ಎಂದು ಎಲ್ಲರ ಅಪೇಕ್ಷಿಯಿತ್ತು, ಕ್ಲೀನ್ ಚಿಟ್ ಸಿಕ್ತು, ಮುಗಿತು. ಈಗ ತೀರ್ಮಾನ ಕೇಂದ್ರ ನಾಯಕರದ್ದು, ಬಹಳ ಚರ್ಚೆ ಮಾಡುವ ವಿಚಾರ ಏನಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

About The Author