ಮಂಡ್ಯ: ಸುಮಲತಾ ಅಂಬರೀಷ್ ಇಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದು, ಮಂಡ್ಯದಿಂದ ಚಿಕ್ಕ ಮಂಡ್ಯ ಹೆದ್ದಾರಿಯಲ್ಲಿ ರೈತರು ಸಂಸದೆ ಸುಮಲತಾ ಅಂಬರೀಷ್ ಎದುರೇ ಧಿಕ್ಕಾರ ಕೂಗಿದ್ದಾರೆ.
ಇಲ್ಲಿನ ನಾಲೆಯೊಂದನ್ನು ಒಡೆಯಬೇಕು ಎಂದು ನಿನ್ನೆ ಬೀಡಿ ಕಾಲನಿ ಜನರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಜಿಲ್ಲಾಧಿಕಾರಿಯ ಕಚೇರಿಗೆ ನುಗ್ಗಿ ಶಾಶ್ವತ ಪರಿಹಾರಕ್ಕಾಗಿ ಪಟ್ಟು ಹಿಡಿದಿದ್ದರು. ನಾಲೆ ಒಡೆದು ಬೀಡಿ ಕಾಲನಿಗೆ ನೀರು ನುಗ್ಗುವುದನ್ನು ತಪ್ಪಿಸಿ ಎಂದು ಪ್ರತಿಭಟನೆ ನಡೆಸಿದ್ದರು. ಆ ಬಗ್ಗೆ ಡಿಸಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟಿದ್ದರು.
ಜಿಲ್ಲೆಯ 6 ಶಾಸಕರಿಗೂ ಸವಾಲು ಹಾಕಿದ ಸಂಸದೆ ಸುಮಲತಾ ಅಂಬರೀಶ್..
ನಾಲೆ ಒಡೆದು ಹಾಕಿದರೆ 750 ಎಕರೆ ಜಮೀನಿಗೆ ಹಾನಿಯಾಗುತ್ತದೆ. ಹೀಗಾಗಿ ನಾಲೆ ಒಡೆಯಬಾರದು ಎಂದು ರೈತರ ಪಟ್ಟುಹಿಡಿದಿದ್ದರು. ಸ್ಥಳದಲ್ಲಿ ತಹಶೀಲ್ದಾರ್ ಭರವಸೆ ಕೊಟ್ಟ ಬಳಿಕ ಪ್ರತಿಭಟನೆ ಕೈ ಬಿಟ್ಟ ಚಿಕ್ಕಮಂಡ್ಯ ಗ್ರಾಮಸ್ಥರು, ನಂತರ ಸಂಸದೆ ಸುಮಲತಾ ಅವರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ತಹಶೀಲ್ದಾರ್ ಹಾಗೂ ಸಂಸದೆ ಇಬ್ಬರೂ ನಾಲೆ ಒಡೆಸುವುದಿಲ್ಲ ಎಂದು ಭರವಸೆ ಕೊಟ್ಟ ಬಳಿಕ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.
ಇನ್ನೂ ಸ್ಥಳದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ್ತು ಇಂಡುವಳು ಸಚ್ಚಿದಾನಂದ ಮತ್ತು ಸುಮಲತಾ ಬೆಂಬಲಿಗರು ಇದ್ದರೂ.