ಮೈಸೂರು: ಜೆಡಿಎಸ್ ಪಕ್ಷ ಬೆಳೆದು ಬದುಕಿರುವುದು ರೈತರು ಹಾಗೂ ದೀನ ದಲಿತರಿಗಾಗಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಮೈಸೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜೆಡಿಎಸ್ ಕಾರ್ಯಗಾರದಲ್ಲಿ ಮಾತನಾಡಿದ ಅವರು, ತಳ ಸಮುದಾಯದರಿಗೂ ರಾಜಕೀಯ ಮೀಸಲಾತಿ ದೊರಕಿಸಿಕೊಟ್ಟಿರುವುದು ದೇವೇಗೌಡರು ಮಾತ್ರ. ಈಗಲೂ ಬಹಳಷ್ಟು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹಾಸನಾಂಬೆಯ ದರ್ಶನಕ್ಕೆ ಬಂದ ವೇಳೆ ವ್ಯಕ್ತಿ ಸಾವು..
ಕಿತ್ತೂರು, ಕಲ್ಯಾಣ ಕರ್ನಾಟಕ ಸೇರಿ ಇಡೀ ಉತ್ತರ ಕರ್ನಾಟಕದಿಂದ ಕನಿಷ್ಠ 35 ಸ್ಥಾನ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರಕ್ಕೆ ಸಾಗಲು ವಾಹನ ಸಿದ್ದವಾಗಿದೆಯಾ ಎಂಬುದಾಗಿ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೇಳುತ್ತಿದ್ದಾರೆ. ಪಕ್ಷವೂ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಸ್ವತಂತ್ರ ಸರ್ಕಾರ ರಚನೆ ಮಾಡಬೇಕು ಎಂಬುವುದು ಎಲ್ಲರ ಬಯಕೆ, ಅವರ ಕನಸು ನನಸು ಮಾಡಬೇಕು ಎಂಬುದೇ ನಮ್ಮ ಗುರಿ ಎಂದು ಎಚ್ ಡಿ ಕೆ ಅವರು ತಿಳಿಸಿದರು.