Thursday, December 12, 2024

Latest Posts

ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..

- Advertisement -

ಹಾಸನ: ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಾವಿರ ಸಾವಿರ ಭಕ್ತಗಣಗಳೇ ಬರುತ್ತಿದೆ. ಮಾಜಿ ಸಚಿವ ರೇವಣ್ಣ ಮತ್ತು ಶಾಸಕ ಪ್ರೀತಂಗೌಡ ಕೂಡ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದು, ಗರ್ಭಗುಡಿಯ ಬಾಗಿಲ ಬಳಿ ಮುಖಾಮುಖಿಯಾಗಿದ್ದರು. ಆದ್ರೆ ಇಬ್ಬರೂ ಕೂಡ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ.

ಹಾಸನಾಂಬೆ ದೇವಿ ದರ್ಶನದ ವಿಷಯದಲ್ಲೂ ಮಾಜಿ ಸಚವಿ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ. ತಾವು ಮೊದಲು ಹಾಸನಾಂಬೆಯ ದರ್ಶನಕ್ಕೆ ತೆರಳಿದ್ದಾಗ, ರೇವಣ್ಣ ಬರುತ್ತಿದ್ದಾರೆಂಬ ವಿಷಯ ತಿಳಿದು, ಪ್ರೀತಂ ಗರ್ಭಗುಡಿಯೊಳಗೆ ಹೋಗಿ, ಸುಮಾರು 10 ನಿಮಿಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರೇವಣ್ಣ ದೇವಿ ದರ್ಶನಕ್ಕೆ ಹೊರಗೆ ಕಾಯಬೇಕಾಯಿತು.

ನಂತರ ರೇವಣ್ಣ ಬಾಗಿಲ ಬಳಿ ನಿಂತಿದ್ದರೂ, ಪ್ರೀತಂಗೌಡ ಮಾತ್ರ ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ರೇವಣ್ಣ ಕೂಡ ಪ್ರೀತಂನನ್ನು ನೋಡದೇ, ಗರ್ಭಗುಡಿಗೆ ಹೋಗಿ ದೇವಿಗೆ ಪೂಜೆ ಸಲ್ಲಿಸಿದರು.  ಶಾಸಕನಾದಾಗಿಂದಲೂ ಪ್ರೀತಂಗೌಡ ದೇವೇಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಎಲೆಕ್ಷನ್ ಸಮೀಪಿಸುತ್ತಿರುವ ಕಾರಣಕ್ಕೆ ಜಟಾಪಟಿ ಇನ್ನೂ ಹೆಚ್ಚಾಗಿದೆ.

ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಪ್ರಸ್ತಾಪ ಆಗಿಲ್ಲ: ಹೆಚ್.ಪಿ. ಸ್ವರೂಪ್

- Advertisement -

Latest Posts

Don't Miss