ಹಾಸನ: ಎಂಎಲ್‌ಸಿ ಶರವಣ್ ಹಾಸನಾಂಬೆಯ ದರ್ಶನ ಮಾಡಲು, ಕುಟುಂಬ ಸಮೇತರಾಗಿ ಇಂದು ಹಾಸನಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ್ದ ಶರವಣ್, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಬಹಳ ಜನಕ್ಕೆ ದೇವಿ ದರ್ಶನ ಮಾಡಲು ಆಗಿರಲಿಲ್ಲ. ಈ ಭಾರಿ ವಿಶೇಷವಾಗಿ ಜಗನ್ಮಾತೆ ದರ್ಶನ ಮಾಡಲು ಕುಟುಂಬ ಸಮೇತರಾಗಿ ಬಂದಿದ್ದೇನೆ. ಬಹಳ ಖುಷಿಯಾಗಿದೆ ತಾಯಿ ಆಶೀರ್ವಾದ ಪಡೆದಿದ್ದೇನೆ. ನಮ್ಮ ಮುಂದೆ ಇರುವ ಗುರಿ, ನಮ್ಮ ವರಿಷ್ಠರಾದ ಎಚ್.ಡಿ.ದೇವೇಗೌಡರು ಆರೋಗ್ಯ ಇನ್ನಷ್ಟು ಚೇತರಿಕೆ ಕಾಣಲಿ ಎಂದು ಶರವಣ್ ಹೇಳಿದ್ದಾರೆ.
ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಪ್ರಸ್ತಾಪ ಆಗಿಲ್ಲ: ಹೆಚ್.ಪಿ. ಸ್ವರೂಪ್
2023 ರ ಚುನಾವಣೆಯಲ್ಲಿ ಅವರ ದೊಡ್ಡಮಟ್ಟದ ಹೋರಾಟ ಏನಿದೆ ಅದರಲ್ಲಿ ನಾವು ಜಯಗಳಿಸಬೇಕು. ನ.1 ರಂದು ಕೋಲಾರದ ಮುಳಬಾಗಿಲಿನಿಂದ ವಿಘ್ನೇಶ್ವರನ ಆಶೀರ್ವಾದಿಂದ ಪಂಚರತ್ನ ಕಾರ್ಯಕ್ರಮವನ್ನು ಆರಂಭ ಮಾಡುತ್ತಿದ್ದೇವೆ. ನಮ್ಮ ನಾಯಕರಾದ ಕುಮಾರಣ್ಣ ಅವರಿಗೆ ದೊಡ್ಡಮಟ್ಟದಲ್ಲಿ ಶಕ್ತಿ ಕೊಟ್ಟು, ಪಂಚರತ್ನ ಕಾರ್ಯಕ್ರಮ ಅನುಷ್ಠಾನ ಮಾಡಲು ಎಲ್ಲಾ ರೀತಿಯಲ್ಲೂ ಆಶೀರ್ವಾದ ಮಾಡಲಿ ಎಂದು ವಿಶೇಷವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಶರವಣ್ ಹೇಳಿದ್ದಾರೆ.
ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..
ದೇವೇಗೌಡರ ಕಣ್ಣೆದುರೆ ನಮ್ಮ ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ನಮ್ಮ ಸಂಕಲ್ಪ 123 ಏನಿದೆ ಅದಕ್ಕೆ ನಮ್ಮ ಜನ ಸರಿಯಾಗಿ ಆಶೀರ್ವಾದ ಮಾಡ್ತಾರೆ ಅನ್ನುವ ವಿಶ್ವಾಸವಿದೆ. 2023 ರಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಮಾರಣ್ಣ ಪಟ್ಟಾಭಿಷೇಕ ಆಗುವಂತಹ ದೊಡ್ಡ ನಿರೀಕ್ಷೆಯಲ್ಲಿ ದೇವಿಯನ್ನು ಪ್ರಾರ್ಥಿಸಿದ್ದೇನೆ ಎಂದು ಶರವಣ್ ಹೇಳಿದ್ದಾರೆ.

