Friday, December 13, 2024

Latest Posts

‘ನಾನು ಯಾರಿಂದಲೂ ಛೀ, ಥೂ ಎನಿಸಿಕೊಂಡು ಅಧಿಕಾರ ಮಾಡಲಿಲ್ಲ’..

- Advertisement -

ಮಂಡ್ಯ: ಮಂಡ್ಯದ ತಿರುಮಲಾಪುರದ ಹುಲಿಯೂರಮ್ಮ ದೇವಸ್ಥಾನವನ್ನು ಉದ್ಘಾಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಏನೇನು ಮಾಡಿತ್ತು ಅನ್ನೋದರ ಬಗ್ಗೆ ಹೇಳಿದ್ದಾರೆ.

ನೀವು ಆಶೀರ್ವಾದ ಮಾಡಿದ್ರಿಂದ 5 ವರ್ಷ ಸಿಎಂ ಆಗಿದ್ದೆ.  ಯಾರಿಂದಲೂ ಛೀ ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನುಡಿದಂತೆ ನಡೆದಿದ್ದೇವೆ. 158 ಭರವಸೆಗಳನ್ನೂ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ಕೊಟ್ಟೆ. ಕೆಲವೇ ಜಾತಿಗಳಿಗೆ ಸೀಮಿತವಾದ ಅಧಿಕಾರ ಮಾಡಲಿಲ್ಲ ಎಂದು ಹೇಳಿದ್ದಾರೆ.

ಮದ್ದೂರಿನಲ್ಲಿ ಜಯಭೇರಿ ಬಾರಿಸಲೇಬೇಕೆಂದು ಪಣತೊಟ್ಟ ಬಿಜೆಪಿ: ಕ್ಷೇತ್ರಕ್ಕೆ ಕೇಂದ್ರ ಸಚಿವರ ಭೇಟಿ..

ಅಕ್ಕಿ, ಹಾಲು, ಶೂ, ಸಮವಸ್ತ್ರ ಎಲ್ಲಾ ಧರ್ಮ, ಜಾತಿವರಿಗೂ ಉಪಯೋಗವಾಗತ್ತೆ. ಇವತ್ತು ಎಲ್ಲವನ್ನೂ ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ಸ್ಕಾಲರ್ ಶಿಪ್ ಕೊಟ್ಟಿಲ್ಲ. SC, ST ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಆದರೂ SC, STಗಳ ಬಗ್ಗೆ ಮಾತನಾಡಲಿಕ್ಕೆ ಇವರಿಗೆ ಯಾವ ನೈತಿಕತೆ ಇದೆ. ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರೋದೇ ಹಿಂಬಾಗಲಿನಿಂದ. ಹಿಂಬಾಗಿಲಿಂದ ಬಂದಿದ್ದಾರೆ, ಮುಂಭಾಗಲಿಂದಲೇ ಓಡಿಸೋಣ.  ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾವು ಅಧಿಕಾರಕ್ಕೆ ಬಂದ್ರೆ ಜನೋಪಯೋಗಿ ಕೆಲಸ ಮಾಡ್ತೇವೆ. ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಬಂದ್ರೆ ಫ್ಯಾಕ್ಟರಿ ಓಪನ್ ಮಾಡ್ತೀನಿ. ಜನರಿಗೆ ಉಪಯೋಗ ಆಗೋ ಯೋಜನೆ ತರ್ತೀವಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರ ಸೇಬು ಹಾರಕ್ಕಾಗಿ ಕಿತ್ತಾಟ, ಕಾರ್ ಮುಂದೆ ಜಮಾಯಿಸಿದ ಜನ..

ಇನ್ನು ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಿದ್ದರಾಮಯ್ಯ, ಯಾರು ಯಾರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ್ದಾರೆ. ಶೋಷಣೆಗೆ ಒಳಪಟ್ಟವರಿಗೆ ಮೀಸಲಾತಿ ಕೊಡುವುದು ಸರ್ಕಾರದ ಜವಾಬ್ದಾರಿ. ಆರ್ಟಿಕಲ್ 15,16 ಪ್ರಕಾರ ಕೊಡಬೇಕು. ಮೀಸಲಾತಿ ಕೇಳುವುದು ತಪ್ಪೇನಿದೆ.? ಎಂದು ಪ್ರಶ್ನಿಸಿದ್ದಾರೆ. ಸಿದ್ದು-ಡಿಕೆಗೆ ಖರ್ಗೆಯಿಂದ ಭಯ ಶುರುವಾಗಿದೆ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರಿತಿಕ್ರಿಯಿಸಿದ ಸಿದ್ದರಾಮಯ್ಯ, ಕಟೀಲ್ ಒಬ್ಬ ಜೋಕರ್, ಅವನಿಗೆ ಉತ್ತರ ಕೊಡಲ್ಲ ಎಂದಿದ್ದಾರೆ.

- Advertisement -

Latest Posts

Don't Miss