ಯುವ ಪೀಳಿಗೆಯಾಗಿರುವ ವಿಧ್ಯಾರ್ಥಿಗಳು ಯುವ ಶಕ್ತಿಯಾಗಿ ಮಾರ್ಪಾಡಾಗಬೇಕು. ವಿದ್ಯಾವಂತರಿಂದ ರಾಷ್ಟ್ರ ಸದೃಢವಾಗುತ್ತದೆ. ಯುವ ಪೀಳಿಗೆ ಭವ್ಯ ಭಾರತದ ಕಲ್ಪನೆಯೊಂದಿಗೆ ಭಾರತದಲ್ಲಿ ಸತ್ಪ್ರಜೆಯಾಗಿ ದೇಶವನ್ನು ಮುನ್ನಡೆಸಬೇಕು.ಇಂದಿನ ಯುವ ಪೀಳಿಗೆಯೇ ಭಾರತದ ಸಂಪತ್ತು ಎಂದು ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರು ತಿಳಿಸಿದರು. ಮದ್ದೂರು ತಾಲ್ಲೂಕಿನ ಭಾರತಿ ನಗರದ ಭಾರತಿ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಪ್ರವಾಸ ನನಗೆ ಬಹಳ ಸಂತೋಷವನ್ನು ಉಂಟುಮಾಡಿದೆ.ಭಾರತದಲ್ಲಿನ ಯುವ ಪೀಳಿಗೆಯು ಬಹಳ ಬಲಿಷ್ಟವಾದದ್ದು, 58 ಕೋಟಿ ಯುವ ಜನಸಂಖ್ಯೆಯನ್ನು ಕಾಣುತ್ತೇವೆ. ಭಾರತದ ಭವಿಷ್ಯದ ಮುಂದೆ ನಿಂತು ಮಾತನಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಯುವ ಪೀಳಿಗೆಯನ್ನು ಸದೃಢಪಡಿಸಲು ಹಾಗೂ ಅವರಿಗೆ ಉತ್ತಮವಾದ ಉದ್ಯೋಗವನ್ನು ಕಲ್ಪಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ್ ಎಂಬಂತಹ ಮಹತ್ವಪೂರ್ಣವಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.
ಪವಿತ್ರ ಮೃತ್ತಿಕೆ ಸಮರ್ಪಿಸುವ ಮೂಲಕ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವ ಸಲ್ಲಿಸಿ: ಗೋಪಾಲಯ್ಯ ಕೆ
ಎನ್.ಇ.ಪಿ ಮೂಲಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಉತ್ತೇಜಿಸಲು ಸ್ವಯಂ ಉದ್ಯೋಗದ ಜೊತೆಗೆ ಇನ್ನಿತರ ಉದ್ಯೋಗಗಳನ್ನು ಗಳಿಸಲು ಸಹ ಅನೇಕ ಯೋಜನೆಗಳನ್ನು ಜಾರಿಗೆ ತಂದು ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.
ವಿಶ್ವದಲ್ಲೇ ಬಹಳಷ್ಟು ದೇಶಗಳು ಭಾರತ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಯೋಜನೆಯಡಿ ಸುರಕ್ಷಿತವಾಗಿ ಕರೆತರಲಾಯಿತು ಎಂದರು.
ತಾಂತ್ರಿಕ ಶಿಕ್ಷಣವನ್ನು ವಿದ್ಯಾರ್ಥಿಗಳು ಹೇಗೆ ಅಳವಡಿಸಿಕೊಳ್ಳಬೇಕು ಹಾಗೂ ಅದರಿಂದ ಯಾವ ರೀತಿಯಾಗಿ ವ್ಯವಹಾರವನ್ನು ಮಾಡಬಹುದು ಎಂಬುವಂತಹದ್ದನ್ನು ಅರಿತುಕೊಳ್ಳಲು ಹಾಗೂ ಹಣದ ವ್ಯವಹಾರ ಸುಲಲಿತವಾಗಿ ನಡೆಯಲು ಡಿಜಿಟಲ್ ಮಾಧ್ಯಮವನ್ನು ಮೋದಿಯವರು ಪರಿಚಯಿಸಿದ್ದಾರೆ ಎಂದರು.
‘ಹೆಡ್‌ಬುಷ್ ಚಿತ್ರದ ವಿವಾದಕ್ಕೆ ತೆರೆ ಬಿದ್ದಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ’
ದೇಶ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಅವರು ದೇಶದ ಬೆಳವಣಿಗೆಯ ಬಗ್ಗೆ ಇಂದೇ ಚಿಂತಿಸಬೇಕು. ನಮ್ಮ ದೇಶ ವಿಶ್ವದಲ್ಲೇ ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಉತ್ತಮ ನಾಯಕರನ್ನು ಆಯ್ಕೆಮಾಡಬೇಕು. ಆಯ್ಕೆಯಾಗುವ ಉತ್ತಮ ನಾಯಕ ತನ್ನ ದೇಶಕ್ಕೆ ಮೊದಲ ಸ್ಥಾನ ನೀಡಬೇಕು ಎಂದರು.
ಭಾರತಿ ಕಾಲೇಜಿನ ವಿದ್ಯಾರ್ಥಿಗಳಾದ ಸುದೀರ್,ಯಶ್ವಂತ್,ಚಂದನ್,ತೇಜಸ್ವಿನಿ,ಶಿವಾನಂದ ಹಾಗೂ ಇನ್ನಿತರರು ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಪ್ರಶ್ನೆಗಳನ್ನು ಕೇಳಿದ ಸಂದರ್ಭದಲ್ಲಿ ಸಚಿವರು ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರಿಸಿ ಅವರ ಗೊಂದಲಗಳನ್ನು ಬಗೆಹರಿಸಿದರು.
ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಮಧು ಜಿ.ಮಾದೇಗೌಡ, ಸಿ.ಪಿ.ಯೋಗೇಶ್ವರ್ , ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀದ್ದಾರ್ ಟಿ.ಎನ್.ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಪ್ರಾಂಶುಪಾಲರಾದ ಆರ್.ವಿ.ಪ್ರವೀಣ್ ಗೌಡ, ರಾಮ ಕೃಷ್ಣ ,ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.