ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಗರದ ಜಲ ದರ್ಶಿನಿ ಅತಿಥಿ ಗೃಹದಲ್ಲಿ ಇಂದು 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲ್ಪಡುವ ಅಮರಸೂಳ್ಯ ದಂಗೆಯ ರುವಾರಿ ಹುತಾತ್ಮ ಸುಬೆದಾರ್ ಗುಡ್ಡಮನೆ ಅಪ್ಪಯ್ಯಗೌಡರ ಅವರ ಹುತಾತ್ಮ ದಿನವನ್ನು ಆಚರಿಸಲಾಯಿತು.
ಇತಿಹಾಸವನ್ನು ಸ್ಮರಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ಕನ್ನಡ ರಾಜ್ಯೋತ್ಸವದ ಮುನ್ನ ದಿನವಾದ ಇಂದು ನಾವು ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪೇಗೌಡರನ್ನು ನೆನೆಯುತ್ತಿದ್ದೇವೆ ಆಂಗ್ಲರ ಸತ್ತೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಸ್ವದೇಶವನ್ನು ರಕ್ಷಿಸಲು ಮಹಾ ಸ್ವಾತಂತ್ರ್ಯ ಸಂಗ್ರಾಮವೊಂದು ನಡೆದ ವರ್ಷ. ಇದನ್ನು ಆಂಗ್ಲರು ‘ದಂಗೆ’ ಎಂದರೂ ಅದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ನಾವು ಅರಿತಿದ್ದೇವೆ. ಮಂಗಲ್ ಪಾಂಡೆ,ತಾಂತ್ಯ ಮೊದಲಾದ ವೀರರ ಬಲಿದಾನಗಳ ಬಗ್ಗೆ ಓದಿದ್ದೇವೆ. ಅಷ್ಟಕ್ಕೂ ಒಂದು ಸಂಘಟಿತ ರೂಪವೆಂಬ ದೃಷ್ಟಿಯಲ್ಲಿ ‘ಸಿಪಾಯಿ ದಂಗೆ’ಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅನ್ನುವುದಾದರೆ 1857ಕ್ಕೂ ಮೊದಲು ವ್ಯವಸ್ಥಿತವಾದ ಹೋರಾಟ ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು.
‘ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರಿಗೆ ನೀಡಿದ ಭರವಸೆ ಈಡೇರಿಸಲಿ, ಇಲ್ಲವಾದಲ್ಲಿ ಪ್ರತಿಭಟನೆ ಗ್ಯಾರಂಟಿ’
ನಾವು ಇತಿಹಾಸವನ್ನು ಮರೆಯುತ್ತಿದ್ದೇವೆ 1857 ರ ಪ್ರಥಮ ಸ್ವತಂತ್ರ ಸಂಗ್ರಾಮಕ್ಕೆ ಮೊದಲೆ 20 ವರ್ಷ ಮುನ್ನಾ 1837 ರಲ್ಲೆ ದಂಗೆ ನಡೆಸಿ ಬ್ರಿಟೀಷ್ ವಿರುದ್ದ ತೊಡೆತಟ್ಟಿದ ಅಪ್ಪಯ್ಯಗೌಡರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಸ್ವಾತಂತ್ರ್ಯದ ಹೋರಾಟ ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಉತ್ತರಿಯರು ಮಾಡಿದ ಹೋರಾಟಗಳು ಮಾತ್ರವೆ ಸ್ವಾತಂತ್ರ್ಯ ಹೋರಾಟಗಾರರೆಂದರೆ ಕೇವಲ ಉತ್ತರದವರು ಮಾತ್ರವೆ ಈ ಮಣ್ಣಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮರೆಯಾದದ್ದಾದರು ಹೇಗೆ ಮತ್ತು ಏಕೆ ಎಂದು ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಆಂಗ್ಲರು ಹಣದ ಮೂಲಕ ಕಂದಾಯ ಸಲ್ಲಿಸಲು ಆಜ್ಞಾಪಿಸಿದಾಗ ವಸ್ತುರೂಪದಲ್ಲಿ ಕಂದಾಯವನ್ನು ಪಾವತಿಸುತ್ತಿದ್ದ ಕೊಡಗಿನ ಜನರು ಅಸಮದಾನ ಉಂಟಾಗುತ್ತದೆ. ರಾಜ ಪರದೇಶಿಯಾದ ಮೇಲೆ ಸೂಕ್ತ ನಾಯಕತ್ವ ಇಲ್ಲದ್ದರಿಂದ ಅಪರಂಪಾನನ್ನೇ ತಮ್ಮ ನಾಯಕನನ್ನಾಗಿ ಸ್ವೀಕರಿಸುತ್ತಾರೆ.13 ದಿನಗಳ ಕಾಲ ಸೈನ್ಯ ಕಟ್ಟಿಕೊಂಡು ರಾಜ್ಯ ನಿರ್ವಹಿಸುವ ಹೊಣೆಗಾರಿಕೆಯನ್ನ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಅದಾಗಿಯು ಬ್ರಿಟಿಷರ ಹಾಗೂ ನಮ್ಮವರ ಸ್ವತಂತ್ರದ ಫಲವಾಗಿ ಸಂಧಾನಕ್ಕೆ ಕರೆದು ಅವರನ್ನು ಬಂಧಿಸಿ 1832ರ ಅಕ್ಟೋಬರ್ 31 ರಂದು ಕೊಡಗಿನ ಅರಮನೆ ಆವರಣದಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು.
ಮನೆ ಹಂಚಿಕೆ ಲೋಪ: ಕ್ರಮಕ್ಕೆ ಒತ್ತಾಯ ಮಾಡಿದ ಮಾಜಿ ಶಾಸಕ ಎಂ.ಎ ಗೋಪಾಲಸ್ವಾಮಿ
ಇದೊಂದು ವಿಫಲ ದಂಗೆ ಎನಿಸಬಹುದು. ಆದರೆ ಎಂದೂ ವಿಪಲವಾಗಲಿಲ್ಲ! ಅನೇಕ ಮಂದಿ ಆಂಗ್ಲರ ಪರವಾಗಿ ನಿಂತು ರಾಜದ್ರೋಹಿ ಕಾರ್ಯವೆಸಗಿದ್ದರು.ಬೋಪು ದಿವಾನ,ಅಟ್ಲೂರು ರಾಮಪ್ಪಯ್ಯನಂತಹ ಅನೇಕ ದ್ರೋಹಿಗಳು ದಂಗೆ ವ್ಯವಸ್ಥೆಯನ್ನು ಕೆಡಿಸಿದ್ದರು.
ನಾವು ನಿತ್ಯ ನಡೆದಾಡುವ ನೆಲದಲ್ಲಿ ವೀರ ಶೂರರು ನೂರಾರು ಕ್ರಾಂತಿ ವೀರರು ಇತಿಹಾಸದ ಪುಟಗಳಿಂದ ಮರೆಯಾಗಿದ್ದಾರೆ. ಅಬ್ಬರದ ಭಾಷಣ, ತೋರಿಕೆಯ ಪೊಳ್ಳು ಸಿದ್ದಾಂತದ ನಡುವೆ ಇವರು ಕಾಣದಾಗುವುದು ನಮ್ಮ ದುರ್ದೈವ ಎಂದರು.
ಇದೇ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರಾದ ಕೆವಿ ಶ್ರೀಧರ್ ಗುಡ್ಡೆಮನೆ ಅಪ್ಪೇಗೌಡ ಮತ್ತು ಕೆದಂಬಾಡಿ ರಾಮೇಗೌಡರ ವಿಚಾರಧಾರೆಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ಮೂಲಕ ಅವರ ವಿಚಾರಗಳನ್ನು ಮುಂದಿನ ಯುವ ಪೀಳಿಗೆಯ ಮನಸ್ಸುಗಳಿಗೆ ಮುಟ್ಟಿಸಬೇಕು ಎಂದರು.
ಈ ವೇಳೆ ಉಪಾಧ್ಯಕ್ಷ ಕುಮಾರ್ ಗೌಡ, ವಿದ್ಯಾ ವಿಕಾಸ್ ಶಿಕ್ಷಣ ಸಂಶಯ ಕಾರ್ಯದರ್ಶಿಗಳಾದ ಕವಿಷ್ ಗೌಡ ವೇದರಾಜು ಕೃಷ್ಣಪ್ಪ ಮಾಜಿ ಪಾಲಿಕೆ ಸದಸ್ಯರಾದ ಭರತೇಶ್ ದಿನೇಶ್ ಚಂದ್ರ ಅಭಿಷೇಕ್ ಆನಂದ್ ದೇವರಾಜ್ ಚೇತನ್ ಹಾಗು ಇತರ ಉಪಸ್ಥಿತರಿದ್ದರು