Sunday, December 22, 2024

Latest Posts

ನ.6ಕ್ಕೆ ಹಾಸನ್ ಓಪನ್ ೨ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ..

- Advertisement -

ಹಾಸನ :​ ​ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನವೆಂಬರ್ ೬ ರಂದು​ ಬೆಳಿಗ್ಗೆ ೧೦:೩೦ಕ್ಕೆ ಹಾಸನ್ ಓಪನ್ ಎರಡನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ಅಯೋಜಿಸಲಾಗಿದೆ ಎಂದು ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಶಿಹಾನ್ ಶಿವಮೊಗ್ಗ ವಿನೋದ್ ತಿಳಿಸಿದರು .​ ​ ​ ​ ​ ​ ​ ​

​ ​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಮ್ಮ ಸಂಸ್ಥೆಯು ಈಗಾಗಲೇ ಹಲವು ಕರಾಟೆ ಪಂದ್ಯಾವಳಿಗಳನ್ನು ಹಾಸನದಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದು, ನವೆಂಬರ್ ೬ ರಂದು ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಹಾಸನ್ ಓಪನ್ ದ್ವಿತೀಯ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಈ ಪಂದ್ಯಾವಳಿಗೆ ಮಹಾರಾಷ್ಟ್ರ ತೆಲಂಗಾಣ ತಮಿಳುನಾಡು ಸೇರಿದಂತೆ ಕರ್ನಾಟಕ ೧೨ಜಿಲ್ಲೆಗಳಿಂದ ಸುಮಾರು ೪೫೦ ಕ್ರೀಡಾಪಟುಗಳು ಆಗಮಿಸುತ್ತಿದ್ದು, ಕ್ರೀಡಾಕೂಟದಲ್ಲಿ ೭ ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲ ವಯೋಮಿತಿಯವರು ಭಾಗವಹಿಸಬಹುದಾಗಿದೆ.

ಗೌರಿಗದ್ದೆ ಆಶ್ರಮದಿಂದ ಹೊರಡುವ ಮೊದಲು ಚಂದ್ರಶೇಖರ್ ಗೆ ವಿನಯ್ ಗುರೂಜಿಯಿಂದ ಕಿವಿಮಾತು..

ಕಟಾ ಮತ್ತು ಕುಮಟಿ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಈ ಪಂದ್ಯಾವಳಿಯು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಶನ್ ಹಾಗೂ ಹಾಸನ ಜಿಲ್ಲಾ ಕರಾಟೆ ಅಸೋಸಿಯೇಶನ್ ನ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದರು. ಪಂದ್ಯಾವಳಿಯ ಉದ್ಘಾಟನೆಯನ್ನು ಅಂದು ಬೆಳಿಗ್ಗೆ ೧೦.೩೦ ಕ್ಕೆ ಹಾಸನದ ಜನಪ್ರಿಯ ಶಾಸಕರಾದ ಪ್ರೀತಂ ಗೌಡ ರವರು ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶ್ರೀ ಮೋಹನ್ ಕುಮಾರ್, ನಗರಸಭೆ ಅಧ್ಯಕ್ಷರು, ಈ. ಕೃಷ್ಣಗೌಡ, ಅಧ್ಯಕ್ಷರು ಸರಕಾರಿ ನೌಕರರ ಸಂಘ ಹಾಸನ, ಹರೀಶ್ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಡಾ ಬಿ.ಸಿ. ರವಿಕುಮಾರ್, ಡಾ. ಕೃಷ್ಣಮೂರ್ತಿ, ಡಾ ಬಶೀರ್ ಅಹ್ಮದ್,ಶ್ರೀಕುಮಾರ್ ಎಂ ಸಿ ಮಲ್ನಾಡ್ ಕಾಲೇಜ್ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಶನ್ ನ ರಾಜ್ಯಾಧ್ಯಕ್ಷ ಶಿಹಾನ್ ಶಿವಮೊಗ್ಗ ವಿನೋದ್ ವಹಿಸಲಿದ್ದು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹಾಸನ ಜಿಲ್ಲಾ ಕರಾಟೆ ಅಸೋಸಿಯೇಶನ್ ನ ಅಧ್ಯಕ್ಷ ಮೊಹಮ್ಮದ್ ಆರಿಫ್ ವಹಿಸಲಿದ್ದಾರೆ ಎಂದು ಹೇಳಿದರು.​ ​

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಅದಿತಿ ಪ್ರಭುದೇವ್ ​ ​

​ ​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮದ್ ಆರೀಫ್, ಸಿಮ್ರಾನ್, ಬಾಷಾ, ಸೂಫಿಯಾನ್, ಸಲ್ಮಾನ್ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss