ಗಾಯಕಿ ಪಲಕ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖ್ಯಾತ ಸಂಗೀತ ನಿರ್ದೇಶಕ/ ಗಾಯಕ, ಗೀತ ರಚನಕಾರ ಮಿಥುನ್ ಶರ್ಮಾ ಅವರನ್ನು ಕೈ ಹಿಡಿದಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹಾಡುಗಳಿಗೆ ತಮ್ಮ ಧ್ವನಿ ನೀಡುರುವ ಪಲಕ್ ಮುಚ್ಚಲ್,ಕನ್ನಡದಲ್ಲೂ ಹಾಡುಗಳನ್ನು ಹಾಡಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ತಮಿಳು, ತೆಲಗು, ಮರಾಠಿ, ಭೋಜ್ ಪುರಿ, ಪಂಜಾಬಿ, ಉರ್ದು ಹೀಗೆ ಅನೇಕ ಭಾಷೆಗಳ ಹಾಡುಗಳಿಗೆ ಇವರು ತಮ್ಮ ಕಂಠವನ್ನು ನೀಡಿದ್ದಾರೆ.
ಪಲಕ್ ಮುಚ್ಚಲ್ ಮತ್ತು ಮಿಥುನ್ ಶರ್ಮಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಿಥುನ್ ಅವರು ಬಾಲಿವುಡ್ ನಲ್ಲಿ ಅನೇಕ ಹಿಟ್ ಹಾಡುಗಳಿಗೆ ಸಂಗೀತ ನೀಡಿ ಜನಪ್ರಿಯತೆ ಗಳಿಸಿದ್ದಾರೆ. ಏಕ್ ವಿಲನ್, ಆಶಿಕಿ 2, ಅನ್ವರ್ ಸೇರಿದಂತೆ ಹೀಗೆ ಹಲವು ಚಿತ್ರಗಳಿಗೆ ಸಂಗೀತ ನೀಡಿ ಜನಪ್ರೀಯತೆ ಗಳಿಸಿದ್ದಾರೆ. ಇನ್ನು ಪಲಕ್ ಮುಚ್ಚಲ್ ಕನ್ನಡದಲ್ಲಿಅಯೋಗ್ಯ ಸಿನಿಮಾ, ಅಧ್ಯಕ್ಷ ಮತ್ತು ಮುಕುಂದ ಮುರಾರಿ ಹೀಗೆ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿ ಸೈ ಎನಿಸಿಕೊಂಡಿದ್ದಾರೆ.
ಪಲಕ್ ಮುಚ್ಚಲ್ ಅವರು ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ, ಅದರಲ್ಲಿ ಬಂದ ಹಣದಿಂದ ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ಇದುವರೆಗೆ 2,200ಕ್ಕೂ ಹೆಚ್ಚು ಮಕ್ಕಳಿಗೆ ಸಹಾಯ ಮಾಡಿ ಹಲವಾರು ಕುಟುಂಬಗಳಿಗೆ ದೇವರಾಗಿದ್ದಾರೆ.
ಮುಂಬೈನಲ್ಲಿ ಪಲಕ್ ಮುಚ್ಚಲ್ ಮತ್ತು ಮುಥುನ್ ಅವರ ವಿವಾಹವಾಗಿದ್ದು, ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಇನ್ನು ಅಭಿಮಾನಿಗಳಿಗೆ ಇವರಿಬ್ಬರ ಜೊಡಿ ಒಂದಾಗಿರುವುದಕ್ಕೆ ಸಂತಸವಾಗಿದ್ದು ಅಭಿನಂದನೆ ತಿಳಿಸಿದ್ದಾರೆ.