Ott Movie: ಮಯೂಖಾ.. ಕುತೂಹಲಕಾರಿ ಮತ್ತು ಭಯಾನಕ ಸಿನಿಮಾ. ನೀವು ಓರ್ವ ಯುವತಿಯಾಗಿದ್ದು, ಸಿಟಿಗೆ ಬಂದು ಯಾವುದೋ ಬಾಡಿಗೆ ರೂಮಿನಲ್ಲಿ ಉಳಿಯುತ್ತೀರಿ ಎಂದೆಣಿಸಿ. ನಿಮ್ಮ ರೂಮ್ ಕೀನಾ ಕದ್ದು, ಯಾರೋ ವ್ಯಕ್ತಿ ಅದನ್ನಾ ನಕಲಿ ಕೀ ತಯಾರಿಸಿ, ನೀವಿಲ್ಲದಾಗ ನಿಮ್ಮ ರೂಮ್ ಬಂದು ಸೇರಿದ್ರೆ ಏನಾಗಬಹುದು ಅಂತಾ 1 ಬಾರಿ ಯೋಚಿಸಿ.
ಮೈ ಜುಮ್ಮನ್ನತ್ತೆ ತಾನೇ..? ಎಸ್.. ಅದೇ ರೀತಿ ಮಯೂಖ ಸಿನಿಮಾ ಶುರು ಆಗೋದು. ಮಯೂಖ ಅನ್ನೋ ರೂಮಿಗೆ ಪ್ರತಿದಿನ ಓರ್ವ ವ್ಯಕ್ತಿ ಬಂದು, ಮಂಚದ ಕೆಳಗೆ ಅವಿತಿರುತ್ತಾನೆ. ರಾತ್ರಿ ಮಯೂಖಾ ಮಲಗಿದ ಬಳಿಕ ಆಕೆಯ ರೂಮಿನಲ್ಲೇ, ಆಕೆಯದ್ದೇ ಬಾತ್ರೂಮ್ ಬಳಸಿ, ಅಲ್ಲೇ ಸ್ನಾನ ಮಾಡಿ, ಅವಳ ಜತೆಯೇ ಮಲಗುತ್ತಾನೆ. ಬೆಳಿಗ್ಗೆ ಆಕೆ ಏಳುವುದಕ್ಕೂ ಮುನ್ನ ಆತ ಎದ್ದು ಹೋಗಿರುತ್ತಾನೆ.
ಆದರೂ ಮಯೂಖಾಗೆ ತನ್ನ ಜೀವನದಲ್ಲಿ ಏನಾಗುತ್ತದೆ ಅನ್ನೋ ಸುಳಿವೂ ಸಿಗೋದಿಲ್ಲ. ಆಕೆಗೆ ಮನೆಯ ಬಳಿ ಇರುವ ಪುರುಷರನ್ನು ಕಂಡರೆ ಭಯ, ಅಸಹ್ಯ ಆಗುತ್ತದೆ. ಮನೆಯ ಬಳಿ ಇರುವ ಪುರುಷರ ಮೇಲೆಯೇ ಸದಾ ಸಂದೇಹವಿರುತ್ತದೆ. ಹೀಗಿರುವಾಗ ಮಯೂಖಾಳ ಮನೆಯಲ್ಲಿ 1 ಹತ್ಯೆ ನಡೆಯುತ್ತದೆ. ಅಲ್ಲಿಂದ ತನಿಖೆ ಶುರುವಾಗುತ್ತದೆ. ನಿಜವಾದ ಕಥೆ ಕೂಡ ಅಲ್ಲಿಂದಲೇ ಶುರುವಾಗೋದು.
ಹಾಗಾದ್ರೆ ಮಯೂಖಾ ಮನೆಗೆ ನುಗ್ಗುತ್ತಿದ್ದ ಆ ವ್ಯಕ್ತಿ ಯಾರು..? ಯಾಕೆ ಆತ ಹಾಗೆ ಮಾಡುತ್ತಿದ್ದ..? ಮಯೂಖಾಗೂ ಆ ವ್ಯಕ್ತಿಗೂ ಇರೋ ಸಂಬಂಧಾ ಆದ್ರೂ ಏನು..? ಇದೆಲ್ಲ ತಿಳಿಬೇಕು ಅಂದ್ರೆ ನೀವು ಸಿನಿಮಾ ನೋಡಲೇಬೇಕು.
ಈ ಸಿನಿಮಾದಲ್ಲಿ ಕನ್ನಡದ ನಟಿ, ಜೆಂಡುಬಾಂಬ್ ಖ್ಯಾತಿಯ ಪಾಯಲ್ ಚಂಗಪ್ಪ ಮಯೂಖಾ ಅನ್ನೋ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದು ತೆಲುಗು ಸಿನಿಮಾವಾದ್ರೂ, ಜಿಯೋ ಹಾಟ್ಸ್ಟಾರ್ನಲ್ಲಿ ಈ ಕನ್ನಡ ಸಿನಿಮಾ ಲಭ್ಯವಿದೆ.




