Ott Movies: ಐ ಆ್ಯಮ್ ಗೇಮ್.. ದುಲ್ಕರ್ ಸಲ್ಮಾನ್ ಅಭಿನಯದ ಸಖತ್ ಕುತೂಹಲಕಾರಿಯಾಗಿರುವ ಸಿನಿಮಾ. ಅಪ್ಪ ನೀಡಿದ ಕಂಪನಿ ಜವಾಬ್ದಾರಿ ನಿರ್ಲಕ್ಷಿಸುವ ಡ್ಯಾನಿ, ಜೂಜಾಡಿ ದುಡ್ಡು ಮಾಡಲು ಶುರು ಮಾಡ್ತಾನೆ.
ಶುರುವಿನ ಗೇಮ್‌ನಲ್ಲಿ ಗೆದ್ದರೂ, ಬಳಿಕ ಸೋಲುತ್ತಾ ಹೋಗುತ್ತಾನೆ ಡ್ಯಾನಿ. 3 ಕೋಟಿಗೂ ಅಧಿಕ ಹಣ ಕಳೆದುಹೋದ ಬಳಿಕ, ಆ ಸಾಲ ತೀರಿಸಲು ಅಮ್ಮನ ಬಳಿ ಸಹಾಯ ಕೇಳುತ್ತಾನೆ. ಅಮ್ಮ ತನ್ನ ಬಳಿ ಇದ್ದ ಲಕ್ಷ ಲಕ್ಷ ಹಣ ನೀಡಿದರೂ ಆತ ಅಸಮಾಧಾನದಿಂದಲೇ ಹಣ ಪಡೆದು, ಕ್ರಿಕೇಟ್ ಜೂಜಿಗೆ ಆ ಹಣ ಸುರಿಯುತ್ತಾನೆ.
2ರಿಂದ 3 ಮ್ಯಾಚ್ ಗೆದ್ದ ಬಳಿಕ ದುರಾಸೆ ಹೆಚ್ಚಾಗಿ, ಇರುವ ಹಣವೆಲ್ಲ ಹಾಕಿ, ಎಲ್ಲ ಕಳೆದುಕ“ಂಡು ಪಾಪರ್ ಆಗುತ್ತಾನೆ. ಆ ವೇಳೆ ರೌಡಿಗಳನ್ನು ಎದುರು ಹಾಾಕಿಕಂಡು ಅವರಿಂದ ತಪ್ಪಿಸಿಕ`ಂಡು ಬರುವ ವೇಳೆ ಡ್ಯಾನಿ, ಅಪಘಾತದಲ್ಲಿ ಸಿಲುಕಿ ಕೈ ಕಳೆದುಕ“ಳ್ಳುತ್ತಾನೆ. ಆತ ಕೋಮಾಗೆ ಹೋದ ಸಮಯದಲ್ಲಿ ಆತನ ಕೈಗೆ ಸರ್ಜರಿ ಮಾಡಿ, ಬೇರೆ ಕೈ ಕೂರಿಸಲಾಗುತ್ತದೆ. ಆ ತಕ್ಷಣವೇ ಕಥೆ ಶುರುವಾಗೋದು.
ಅಲ್ಲಿಂದ ಕುರ್ಚಿ ಬಿಟ್ಟು ಕದಲದ ರೇಂಜಿಗೆ ಮೂವಿ ಇಂಟರೆಸ್ಟಿಂಗ್ ಅನ್ಸತ್ತೆ. ಯಾಕಂದ್ರೆ ದುಲ್ಕರ್ ಊಹೆನೂ ಮಾಡದ ಘಟನೆಗಳು ಆತನ ಜೀವನದಲ್ಲಿ ನಡೆಯುತ್ತೆ. ಮುಂಚೆ ಎಲ್ಲಾ ಬರೀ ದುಡ್ಡು ಮಾಡಬೇಕು ಅಂತಾ ಇದ್ದ ದುಲ್ಕರ್‌ಗೆ ಸರಿ ದಾರಿಗೆ ತರುವ ಕೆಲಸ ಮಾಡೋದೇ ಆತನ ಬಲಗೈ.
ಈ ನಡುವೆ ನರ್ಸ್ ಜತೆಗೆ ಶುರುವಾಗೋ ಲವ್ ಕೂಡ ಮನಸ್ಸಿಗೆ ಮುದ ನೀಡುತ್ತದೆ. ದುಲ್‌ಕರ್ ಸಲ್ಮಾನ್ ಡ್ಯಾನಿ ಪಾತ್ರ ನಿರ್ವಹಿಸಿದ್ದು, ಕಯಾದು ಲೋಹರ್ ಈಶಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.




