ಬೆಳಗಾವಿಯಲ್ಲಿ ಅಧಿಕಾರಿಗಳಿಂದಲೇ ಬ್ಯಾಂಕ್ ಲೂಟಿ

ಬೆಳಗಾವಿ: ಕರ್ನಾಟಕ ವಿಕಾಸ್ ಬ್ಯಾಂಕ್ ಹುಕ್ಕೇರಿ ಶಾಖೆಯಲ್ಲಿ 1.73 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ‘ಸ್ಥಿರ ಠೇವಣಿ’ ಮೇಲಿನ ಸಾಲದ ನಕಲಿ ದಾಖಲೆಗಳನ್ನು ಸೃಷ್ಠಿಸಿ. 21 ಜನರ ನಕಲಿ ಕಾಗದ ಪತ್ರಗಳನ್ನು ಸಿದ್ದಪಡಿಸಿ ಹಣ ವರ್ಗಾಯಿಕೊಂಡು ಬ್ಯಾಂಕಿಗೆ ಆರ್ಥಿಕ ಹಾನಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

ಈ ಘಟನೆಯ  ಬಗ್ಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ಗೋಕಾಕ ಕಚೇರಿ ಪ್ರಬಂಧಕ ಅವಿನಾಶ್  ಇಂದ್ರಜೀತ್ ಅಸೋದೆ ಅವರು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೂ.9ರಿಂದ ಆ.29ರವರೆಗೆ ಒಟ್ಟು 21 ಸಲ ನಕಲಿ ದಾಖಲೆಗಳ ಮೇಲೆ ಸಾಲ ಪಡೆದು, ಉಳಿದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸೇರಿಸಿಕೊಂಡು ಹಣ ದೊಚಿದ್ದಾರೆ ಮತ್ತು ತಮ್ಮ ಪತ್ನಿ ಖಾತೆಗೆ ಜಮ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೂರು ದಾಖಲಾದ ಹಿನ್ನಲೆ ಮುಖ್ಯ ಆರೋಪಿ ಮಲ್ಲಿಕಾರ್ಜುನ ಶಿರಗಾಂವಿ ತಲೆಮರೆಸಿಕೊಂಡಿದ್ದಾನೆ.

ಆಕಸ್ಮಿಕ ಗುಂಡು ಹಾರಿ ಯೋಧ ಸಾವು

 

About The Author