Wednesday, February 5, 2025

Latest Posts

ಕರ್ನಾಟಕದ ಆ ಗುಡಿಯಲ್ಲಿ ಚಪ್ಪಲಿಯ ದಂಡನ್ನು ಸಮರ್ಪಿಸುತ್ತಾರೆ.. ಈ ಸಂಪ್ರದಾಯದ ಹಿಂದೆ ಇರುವ ಕಾರಣಗಳೇನು ಗೊತ್ತಾ..?

- Advertisement -

Temple:

ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗುವಾಗ ತಮ್ಮ ಪಾದರಕ್ಷಗಳನ್ನು ಗುಡಿ ಹೊರಗೆ ಅಥವಾ ಸ್ಟಾಂಡ್ ನಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಬಿಟ್ಟು ಹೋಗುತ್ತೆವೆ. ಏಕೆಂದರೆ ಚಪ್ಪಲಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದನ್ನು ಅಪವಿತ್ರವಾಗಿ ಪರಿಗಣಿಸುತ್ತವೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಗುಡಿಯಲ್ಲಿ ಚಪ್ಪಲಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಇದು ನಮಗೆ ಕೇಳುವುದಕ್ಕೆ ವಿಚಿತ್ರ ವೆನಿಸಿದರೂ ಇದು ನಿಜ .

ಸಾಮಾನ್ಯವಾಗಿ ಎಲ್ಲರು ಗುಡಿಗೆ ಹೋಗುವಾಗ ಹೂವುಗಳು, ಅಗರ್ ಬತ್ತೀಗಳು, ಹಣ್ಣು, ತೆಂಗಿನಕಾಯಿ, ಪ್ರಸಾದ ಮುಂತಾದವುಗಳನ್ನು ತೆಗೆದುಕೊಂಡು ಹೋಗುತ್ತೇವೆ. ಇನ್ನು ಗ್ರಾಮದೇವತೆಗಳದರೆ ಜಂತುಗಳನ್ನೂ ಬಲಿ ಕೊಡುವ ಸಂಪ್ರದಾಯ ವಿದೆ. ಇಂತಹ ಸಂಪ್ರದಾಯಗಳ ಬಗ್ಗೆ ಎಲ್ಲರಿಗೂ ತಿಳಿದಿದೆ, ಈ ಸಂಗತಿಗಳನ್ನೂ ಪಕ್ಕಕ್ಕಿಟ್ಟರೆ, ದೇವಸ್ಥಾನಗಳಿಗೆ ಹೋಗುವವರು ತಮ್ಮ ಪಾದರಕ್ಷಗಳನ್ನೂ ಗುಡಿ ಹೊರಗೆ ಅಥವಾ ಸ್ಟ್ಯಾಂಡ್ನಲ್ಲಿ ಅಥವಾ ಯಾವುದಾದರೊಂದು ಮೂಲೆಗೆ ಬಿಟ್ಟು ಹೋಗುತ್ತಾರೆ. ಏಕೆಂದರೆ ಅವುಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುವುದನ್ನು ಅಪವಿತ್ರವಾಗಿ ಪರಿಗಣಿಸಲಾಗುತ್ತದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಗುಡಿಯಲ್ಲಿ ಚಪ್ಪಲಿಯ ದಂಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ದೇವಾಲಯಕ್ಕೆ ತೆರಳುವ ಭಕ್ತರು ತಮ್ಮ ಬಯಕೆಗಳೆಲ್ಲವೂ ಈಡೇರಲು ಈ ಸಂಪ್ರದಾಯವನ್ನು ಪಾಟಿಸುತ್ತಾರೆ. ಈ ಸಂಧರ್ಭದಲ್ಲಿ ಈ ಆಚಾರದ ಹಿಂದೆ ಇರುವ ಸಂಪೂರ್ಣ ವಿವರಗಳನ್ನು ಈಗ ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ನಿರ್ಮಿಸಿದ ಅಳಂದ ತಾಲುಕಿನಲ್ಲಿ ಗೋಲ ಬಿ ಗ್ರಾಮದಲ್ಲಿ ಲಕ್ಕಮ್ಮ ಅವರ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ದೀಪಾವಳಿ ಮುಗಿದ ಐದು ದಿನಗಳು ಅಂದರೆ ಪಂಚಮಿ ದಿನ, ಜೊತೆಗೆ ಕಾರ್ತಿಕ ಪೌರ್ಣಮಿಯ ಎರಡು ದಿನಗಳು ಜಾತ್ರೆಯನ್ನು ನೆರವೇರಿಸುತ್ತಾರೆ, ಈ ಸಮಯದಲ್ಲಿ ಹೊಸ ಪಾದರಕ್ಷಗಳನ್ನು ಕಟ್ಟುವ ಸಂಪ್ರದಾಯವಿದೆ, ಈ ಗುಡಿಯ ಮುಂದೆ ಹೊಸ ಚಪ್ಪಲಿಗಳನ್ನು ಕಟ್ಟುವುದೇ ಈ ಜಾತ್ರೆಯ ವಿಶೇಷತೆ.

ಅಮ್ಮನವರನ್ನು ಶಾಂತಗೊಳಿಸಲು..
ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಈ ಗುಡಿಗೆ ಬರುವ ಭಕ್ತರೆಲ್ಲರೂ ತಮ್ಮ ಆಸೆಗಳನ್ನು ಈಡೇರಿಸಲು ಗುಡಿ ಮುಂದೆ ಪಾದರಕ್ಷಗಳನ್ನು ಕಟ್ಟುವವರು. ಒಂದು ಸಮಯದಲ್ಲಿ ಈ ದೇವಸ್ಥಾನದಲ್ಲಿ ಎತ್ತುಗಳನ್ನು ಬಲಿ ನೀಡುವ ಸಂಪ್ರದಾಯವಿತ್ತು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೆ ಇದು ಸರ್ಕಾರ ಕಾನೂನು ವಿರೋಧಿ ಎಂದು ಹೇಳಿ ಸಂಪೂರ್ಣವಾಗಿ ಅದನ್ನು ರದ್ದುಗೊಳಿಸಲಾಯಿತು. ಈ ಸಮಯದಲ್ಲಿ ಅಮ್ಮನಿಗೆ ಕೋಪ ಬಂದಿತ್ತು, ಆಗ ಲಕ್ಕಮ್ಮ ದೇವಿಯನ್ನು ಶಾಂತಗೊಳಿಸಲು, ಒಬ್ಬ ಮಹರ್ಷಿ ತಪಸ್ಸು ಮಾಡಿದರು. ಆ ನಂತರ ಎತ್ತುಗಳಬಲಿಯ ಬದಲಿಗೆ ಚಪಲಿಗಳನ್ನು ಸಮರ್ಪಿಸಿದರು. ಇದರಿಂದ ಅಮ್ಮನವರ ಕೋಪ ಕಡಿಮೆಯಾಗಿದೆ ಎಂದು ಅಲ್ಲಿನ ಸ್ಥಳೀಯರ ಮಾತಾಗಿದೆ ಅಂದಿನಿಂದ ಈ ಗುಡಿಯಲ್ಲಿ ಚಪ್ಪಲಿ ಸಲ್ಲಿಸುವ ಸಂಪ್ರದಾಯಗಳು ಪ್ರಾರಂಭವಾದವು ಎಂದು ನಂಬುತ್ತಾರೆ.

ದೇವಾಲಯದ ಇತಿಹಾಸ..
ಕರ್ನಾಟಕದ ಈ ದೇವಾಲಯವು ಬಹಳ ಪ್ರಾಚೀನವಾದುದು. ತಮ್ಮ ಬಯಕೆಗಳನ್ನು ನೆರವೇರಿಸುವುದಕ್ಕಾಗಿ ದೇವಾಲಯದ ಹೊರಗೆ ಇರುವ ಮರಕ್ಕೆ ಚಪ್ಪಲಿಗಳನ್ನು ನೇತಾಡಿಸುತ್ತಾರೆ, ಹಾಗೆಯೇ ಶಾಕಾಹಾರ, ಮಾಂಸಾಹಾರ ಮುಂತಾದವುಗಳನ್ನು ಅಮ್ಮನಿಗೆ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಹೀಗೆ ಲಕ್ಕಮ್ಮ ದೇವಿಗೆ ಚಪ್ಪಲಿ ಸಲ್ಲಿಸುವುದರಿಂದ ದುಷ್ಟಶಕ್ತಿಗಳು ನಿವಾರಣೆಯಾಗುತ್ತವೆ ಎಂದು ನಂಬುತ್ತಾರೆ. ಜೊತೆಗೆ ಪಾದಗಳು, ಮೊಣಕಾಲು ನೋವಿನಿಂದ ಬಳಲುವವರಿಗೆ ಕೂಡ ಸಂಪೂರ್ಣವಾಗಿ ನಯವಾಗಬಹುದೆಂದು ಬಹಳ ಮಂದಿ ನಂಬಿಕೆ. ಆದರೆ ಈ ಅಮ್ಮನವರು ಇತರರ ಹಾನಿಯನ್ನು ಕೋರುವವರನ್ನು, ಕ್ಷಮಿಸುವುದಿಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ದೇವಾಲಯಕ್ಕೆ ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಬಂದು ದರ್ಶನ ಮಾಡುತ್ತಾರೆ.

ಸಂಕಷ್ಟ ಚತುರ್ಥಿ ದಿನ ಗಣೇಶನ ಅನುಗ್ರಹಕ್ಕಾಗಿ ಹೀಗೆ ಮಾಡಿ..!

ನವೆಂಬರ್ 24ರಂದು ಗುರುವಿನ ನೇರ ನಡೆಯಿಂದ ಈ 3ರಾಶಿಯವರಿಗೆ ಭಾರೀ ಅದೃಷ್ಟ..!

ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿಯ ಬಗ್ಗೆ ಕುತೂಹಲಕಾರಿ ಸಂಗತಿಗಳು…!

 

- Advertisement -

Latest Posts

Don't Miss