ಮಂಡ್ಯ: ಮಂಡ್ಯದ ಮಳವಳ್ಳಿಯಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದ್ದು, ಅವರ ಕೊಟ್ಟ ಹೇಳಿಕೆಯಿಂದ, ಅನ್ನದಾನಿಗೆ ಸೋಲಿನ ಭಯ ಕಾಡುತ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ ಅನ್ನದಾನಿ, ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು, ನಾಟಕವಾಡಿಕೊಂಡು ಜೀವನ ಮಾಡ್ತಿನಿ ಎಂದು ಹೇಳಿದ್ದಾರೆ.
ಹಾಸದಲ್ಲಿ ಶಾಸಕ ಪ್ರೀತಮ್ ಜೆ. ಗೌಡರ್ 41ನೇ ಹುಟ್ಟುಹಬ್ಬ ಆಚರಣೆ
ಮಂಡ್ಯದ ಮಳವಳ್ಳಿಯಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅನ್ನದಾನಿ, ನಾನೊಬ್ಬ ಸಾಂಸ್ಕೃತಿಕ ವ್ಯಕ್ತಿ, ಬರೀ ರಾಜಕೀಯನೇ ನೆಚ್ಚಿಕೊಂಡಿಲ್ಲ. ರಾಜಕೀಯನೇ ಅಂಟಿಕೊಂಡು ಅದರಿಂದಲೇ ಆಸ್ತಿ ಮಾಡಿಕೊಂಡು, ರಾಜಕೀಯದಲ್ಲೇ ಶ್ರೀಮಂತನಾಗಬೇಕೆಂಬುದು ನನಗಿಲ್ಲ. ಹಾಡು ಹೇಳ್ತಿನಿ, ನಾಟಕ ಕಲಿತಿದ್ದೀನಿ. ನೀವೇನಾದ್ರು ನನ್ನ ತೆಗೆದು ಆಚೆಗೆ ಹಾಕಿದ್ರೆ. ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡಲು ತೊಂದರೆ ಇಲ್ಲ ನನಗೆ ಎಂದು ಅನ್ನದಾನಿ ಹೇಳಿದ್ದಾರೆ.
ಮಂಡ್ಯ ರೈತರ ಅಹೋರಾತ್ರ ಧರಣಿಯಲ್ಲಿ ಇಂದು ಸಿದ್ದರಾಮಯ್ಯ ಭಾಗಿ
ಅಲ್ಲದೇ, ಹಲವು ಕಲಾವಿದರು ನನಗೆ ಸ್ನೇಹಿತರಿದ್ದಾರೆ. ನಾಲ್ಕು ಒಳ್ಳೇ ಹಾಡು ಹೇಳಿದ್ರೆ ಬದುಕು ನಡೆಸಿಕೊಂಡು ಹೋಗ ಬಹುದು. ದೇವೇಗೌಡ್ರು ಕುಮಾರಸ್ವಾಮಿ ಅವರು ಸಣ್ಣ ಲೋಪ ಇಲ್ಲದೆ ಆಡಳಿತ ನಡೆಸಿದ್ದಾರೆ. ಅವರ ಶಿಷ್ಯನಾಗಿ ನಾನು ಇಲ್ಲಿ ಏನ್ ಮಾಡ್ಬೇಕು ಎಂಬ ಚಿಂತನೆ ನಡೆಸ್ತಿದ್ದೇನೆ. ನಿಮಗ್ಯಾರಾದ್ರು ಹೇಳಿದ್ರೆ ಕಮಿಷನ್ ಇಸ್ಕೊತ್ತಾರೆ ಅಂತ ಹೇಳಿದ್ರೆ. ಕನಕದಾಸರನ್ನೇ ಬಿಡಲಿಲ್ಲ ಸವರ್ಣೀಯರು ನನ್ನ ಬಿಡ್ತಾರಾ ಎಂದು ಪ್ರಶ್ನಿಸಿದ್ದಾರೆ.

