ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈಗಾಗಲೇ ಎರಡು ಬಾರಿ ಬಿಡುಗಡೆಗೆ ರೆಡಿಯಾಗಿ ಮುಂದೂಡಿಕೆಯಾಗಿದ್ದ ಚಿತ್ರ ಇದೀಗ ಸೆ.12ಕ್ಕೆ ರಿಲೀಸ್ ಆಗಲಿದ್ದು, ಈ ಮೂಲಕ 3 ಬಾರಿ ಮುಂದೂಡಿಕೆಯಾದಂತಾಗಿದೆ.
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ರಿಲೀಸ್ ಗೆ ಅದ್ಯಾಕೋ ಸಣ್ಣಪುಟ್ಟ ಅಡೆತಡೆ ಎದುರಾಗ್ತಾನೆ ಇತ್ತು. ಇದೀಗ ಚಿತ್ರದ ಪೋಸ್ಟರ್ ಸಹಿತ ಟ್ವೀಟ್ ಮಾಡಿರೋ ಚಿತ್ರದ ನಿರ್ದೇಶಕ ಕೃಷ್ಣ ಸೆಪ್ಟಂಬರ್ 12ನೇ ತಾರೀಖಿನಂದು ಪೈಲ್ವಾನ್ ತೆರೆಗಪ್ಪಳಿಸಲಿದ್ದಾನೆ ಅಂತ ಹೇಳಿದ್ದಾರೆ. ಆಗಸ್ಟ್ 29ಕ್ಕೆ ಈ ಹಿಂದೆ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದ್ರೆ ಕಾರಣಾಂತರಗಳಿಂದಾಗಿ ಸೆಪ್ಟಂಬರ್ 12ಕ್ಕೆ ಪೈಲ್ವಾನ ರೀಲ್ ಬಾಕ್ಸ್ ನಿಂದ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದ್ದಾನೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಪೈಲ್ವಾನನಾಗಿ ಕಮಾಲ್ ಮಾಡಿದ್ರೆ ಇವರಿಗೆ ಜೋಡಿಯಾಗಿ ಆಕಾಂಕ್ಷಾ ಸಿಂಗ್ ಮಿಂಚಲಿದ್ದಾರೆ. ಇನ್ನು ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಸೆ.12ರಂದು ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.