ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಹಾಸನ: ಜಮೀನು ವಿಷಯದಲ್ಲಿ ಇಬ್ಬರು ಯೋಧರ ಕುಟುಂಬಗಳ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಯಶ್ವಂತ್ ಮತ್ತು ಯಶ್ವಂತ್ ಸಹೋದರ ಯೋಧ ಯತೀಶ್ ಮೇಲೆ ಹಲ್ಲೆ ಮಾಡಿದ್ದು, ಜಗಳದಲ್ಲಿ ಯಶ್ವಂತ್ ಎಂಬುವವರು ಮೃತಪಟ್ಟಿದ್ದಾರೆ. ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ಘಟನೆ ನಡೆದಿದೆ. ಯೋಧರ ಕುಟುಂಬಗಳ ನಡುವೆ  ಜಮೀನು ವಿಷಯವಾಗಿ ಗಲಾಟೆ ನಡೆದಿದ್ದು, ಜಗಳದ ವೇಳೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ನೀವು ಆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ…? ಆದರೆ, ಪಪ್ಪಾಯಿ ನೀರನ್ನು ಪ್ರಯತ್ನಿಸಿ..!

ಯೋಧ ಚಂದನ್ ಮತ್ತು ಸಂಬಂಧಿಕರಿಂದ ಯಶ್ವಂತ್ ಮತ್ತು ಯಶ್ವಂತ್ ಸಹೋದರ ಯೋಧ ಯತೀಶ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದ ಗಾಯಗೊಂಡಿದ್ದ ಯಶ್ವಂತ್ ಅಧಿಕ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸಾವನ್ನಪಪ್ಪಿದ್ದಾನೆ. ಮೃತ ಯಶ್ವಂತ್ ಸಹೋದರ ಯೋಧ ಯತೀಶ್ ಗೆ ಖಾಸಗಿ‌‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಶ್ವಂತ್ ಕಡೆಯ ಸ್ವಲ್ಪ ಜಾಗ ನಮಗೆ ಸೇರಿದ್ದೆಂದು ಚಂದನ್ ಕುಟುಂಬ ಹಲವು ಬಾರಿ ಗಲಾಟೆ ಮಾಡಿದ್ದರು. ಚಂದನ್ ಮತ್ತು ಆತನ ಸಹೋದರ ಅಶ್ವಥ್ ಸೇರಿ ಐವರ ವಿರುದ್ದ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚಳಿಗಾಲದಲ್ಲಿ ತಿನ್ನಬಹುದಾದ 5 ಅದ್ಭುತ ಆಹಾರಗಳು…!

ಇಂಥ ವಿಷಯಗಳನ್ನ ಮಾತ್ರ ಯಾರಲ್ಲಿಯೂ ಹೇಳಬೇಡಿ..

About The Author