ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಗೆ ಆಷಾಢ ಅಡ್ಡಿಯಾಗಲ್ಲ, ಹೈಕಮಾಂಡ್ ಹೇಳಿದ್ರೆ ನಾಳೆಯೇ ಸರ್ಕಾರ ರಚನೆಗೆ ಸಿದ್ಧವಿದ್ದೇವೆ ಅಂತ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ವಿಶ್ವನಾಥ್, ನಾವು 4 ವರ್ಷ ಸ್ಥಿರವಾದ ಸರ್ಕಾರ ರಚಿಸಬೇಕಾಗಿದೆ. ಇದಕ್ಕಾಗಿ ನಾವು ಕೆಲವೊಂದು ಸ್ಪಷ್ಟನೆ ನೀಡಬೇಕಿಗದೆ. ಅತೃಪ್ತ ಶಾಸಕರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆಯೂ ಬಿಜೆಪಿ ಯೋಚಿಸಬೇಕಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದು ಹೈಕಮಾಂಡ್ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ ಅಂತ ವಿಶ್ವಾನಾಥ್ ಹೇಳಿದ್ರು.
ಇನ್ನು ಆಷಾಢ ಮಾಸದಲ್ಲಿ ಸರ್ಕಾರ ರಚನೆ ಅನಿವಾರ್ಯತೆ ಎದುರಾಗಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಸರ್ಕಾರ ರಚನೆಗೆ ಆಷಾಢದ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಸೂಚಿಸಿದರೆ ನಾಳಯೇ ಸರ್ಕಾರ ರಚಿಸುತ್ತೇವೆ ಅಂತ ವಿಶ್ವನಾಥ್ ಇದೇ ವೇಳೆ ಹೇಳಿದ್ರು.
ಇನ್ನು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿರುವ ರಾಜ್ಯ ಬಿಜೆಪಿ ನಿಯೋಗ ರಾಜ್ಯದ ಸದ್ಯದ ಪರಿಸ್ಥಿತಿ, ಅತೃಪ್ತರ ಬೇಡಿಕೆ ಸೇರಿದಂತೆ ಮತ್ತಿತರ ಸೂಕ್ಮ ವಿಚಾರಗಳ ಕುರಿತು ಮಾಹಿತಿ ನೀಡಿದೆ. ಅಲ್ಲದೆ ಹೈಕಮಾಂಡ್ ಕೂಡ ನಾವು ಸೂಚನೆ ನೀಡೋವರೆಗೂ ನೀವು ರಾಜ್ಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ರಾಜ್ಯ ಬಿಜೆಪಿ ನಾಯಕರಿಗೆ ಆದೇಶ ನೀಡಿದೆ.