Friday, December 27, 2024

Latest Posts

‘ರಮೇಶ್ ಜಾರಕಿಹೋಳಿ ಅವರು ಬಿಜೆಪಿ ಪಕ್ಷದಲ್ಲಿ ಬಹಳ ಆಳವಾಗಿ ಕೆಲಸ ಮಾಡುತ್ತಾರೆ’

- Advertisement -

ಹಾಸನ : ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾತನಾಡಿದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್, ಅಶ್ವತ್ಥ್ ನಾರಾಯಣ್ ಅವರು ಫಿಲಾಸಫಿಕಲ್ ಆಗಿ ಹೇಳಿದ್ದಾರೆ. ಒಬ್ಭ ವ್ಯಕ್ತಿ ತಪ್ಪು ಮಾಡಿ ಶಿಕ್ಷೆ ಆದ ಮೇಲೆ ಆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ ಅಂತ ಹೇಳಿದ್ದಾರೆ. ನಾನೇ ಆ ವಿಚಾರಕ್ಕೆ ಮೊದಲು ರಿಯಾಕ್ಷನ್ ಕೊಟ್ಟಿದ್ದು. ನಮ್ಮ ಪಕ್ಷ ಅಂತಹ ರೌಡಿಶೀಟರ್, ಕ್ರಿಮಿನಲ್ ಹಿನ್ನಲೆಯಲ್ಲಿ ಇರುವವರನ್ನು ಸೇರಿಸುವಂತಹ ಪ್ರಶ್ನೆಯೇ ಇಲ್ಲ ಎಂದು ನಮ್ಮ‌ ರಾಜ್ಯಾಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ನೀವು ಬಿಟ್ಟು ಬಿಡಿ ಎಂದು ಸುಧಾಕರ್ ಹೇಳಿದ್ದಾರೆ.

‘ಇತಿಹಾಸ ತಿರುವಿ ನೋಡಿ, ಯಾರು ಧರ್ಮರಾಜಕಾರಣ ಮಾಡಿದ್ದಾರೆಂದು ಗೊತ್ತಾಗುತ್ತದೆ’

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯಕ್ಕೆ ಉಳಿಗಾಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸುಧಾಕರ್‌, ಅವರಿಗೆ ಉಳಿಗಾಲ ಇಲ್ಲಾ, ರಾಜ್ಯಕ್ಕೆ ಉಳಿಗಾಲನಾ..? ಅವರಿಗೆ ಉಳಿಗಾಲ ಅಂತ ನಾನು ತಿಳಿದುಕೊಂಡಿದ್ದೇನೆ. ರಾಜ್ಯ ಸುಭೀಕ್ಷವಾಗಿದೆ, ಸುಭೀಕ್ಷವಾಗಿರುತ್ತೆ. ಯಾರು ಇರಲಿ, ಯಾರು ಇಲ್ಲದೇ ಇರಲಿ ವ್ಯವಸ್ಥೆ, ರಾಜ್ಯ ಅನ್ನೋದು ಮುಂದುವರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಕೊಲೆಯಾಗುತ್ತೆ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್‌, ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಯಾವ ಅರ್ಥದಲ್ಲಿ ಹೇಳ್ತಾರೆ ನಮಗೆ ಗೊತ್ತಿಲ್ಲ. ಅತಿ ಹೆಚ್ಚು ಹಿಂದೂಗಳು, ಹಿಂದೂ ಧರ್ಮ ಇರುವುದು ಈ ದೇಶದಲ್ಲಿ ಮಾತ್ರ. ಅವರಿಗೆ ಅನ್ಯಾಯ ಆಗರಬಾರದು, ಯಾವುದೇ ಸರ್ಕಾರ ಬರಲಿ, ಯಾವುದೇ ಪಕ್ಷ ಆಡಳಿತ ನಡೆಸಲಿ. ಆ ಒಂದು ದೊಡ್ಡ ಜನಸಂಖ್ಯೆ ಇರುವ ಈ ದೇಶದಲ್ಲಿ ಹಿಂದೂಗಳಿಗೆ ಅನ್ಯಾಯ ಆಗಬಾರದು ಅಂತ ಹೇಳಿದ್ದಾರೆ ಎಂದು ಸುಧಾಕರ್ ಹೇಳಿದರು.

ಸುಂದರಿಯ ಕೊಲೆಯಲ್ಲಿ ಅಂತ್ಯಗೊಂಡ ಪ್ರೇಮಕಥೆ..

ಕಾಂಗ್ರೆಸ್ ಪಕ್ಷ ಬಿಟ್ಟಿದ್ದಕ್ಕೆ ಜನ ನನ್ನನ್ನು ಸೋಲಿಸಿದ್ರು ಎಂಬ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಧಾಕರ್, ಅವರು ಆ ತರ ಹೇಳಿಲ್ಲ. ನನ್ನಂತಹ ಒಳ್ಳೆಯ ವ್ಯಕ್ತಿಯನ್ನ, ಹಗಲಿರುಳು ಕ್ಷೇತ್ರದ ಕೆಲಸ ಮಾಡುವವರನ್ನು ಸೋಲಿಸಿದ್ರಲಾ ನನಗೆ ನೋವಾಗುತ್ತೆ ಅಂತ ಹೇಳಿದ್ದಾರೆ. ನಾನು, ಅಶೋಕ್ ಎಲ್ಲರೂ ವೇದಿಕೆಯಲ್ಲಿದ್ದರು ಎಂದಿದ್ದಾರೆ.

ರಮೇಶ್ ಜಾರಕಿಹೋಳಿ ಗೌಪ್ಯ ಸಭೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುಧಾಕರ್, ರಮೇಶ್ ಜಾರಕಿಹೋಳಿ ಅವರು ಒಳ್ಳೆಯ ನಾಯಕರು, ಅವರದ್ದೇ ಆದ ಶಕ್ತಿ ಇದೆ. ನಮ್ಮ ಪಕ್ಷ ಅವರನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುತ್ತೆ. ಒಳ್ಳೆಯ ಅವಕಾಶಗಳನ್ನು ಕೊಡುತ್ತೆ. ನನಗೆ ತಿಳಿದಿರುವ ಹಾಗೆ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಆ ಭಾಗದಲ್ಲಿ ಬಿಜೆಪಿ ಶಕ್ತಿ ಯಾವ ರೀತಿ ಹೆಚ್ಚು ಮಾಡಬೇಕು ಎಂಬುದರ ಬಗ್ಗೆ ಅವರು ನಿರಂತರವಾಗಿ ಸಭೆಗಳನ್ನು ಮಾಡ್ತಾ ಇದ್ದಾರೆ. ಅವರು ಕೂಡ ತಂತ್ರಗಾರಿಕೆಯನ್ನು ಮಾಡ್ತಾ ಇದ್ದಾರೆ. ನನಗೆ ಪೂರ್ಣ ವಿಶ್ವಾಸವಿದೆ ರಮೇಶ್ ಜಾರಕಿಹೋಳಿ ಅವರು ಬಿಜೆಪಿ ಪಕ್ಷದಲ್ಲಿ ಬಹಳ ಆಳವಾಗಿ ಕೆಲಸ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಅವಕಾಶವನ್ನು ಪಕ್ಷ ಮಾಡಿಕೊಡಲಿದೆ ಎಂದು ಸುಧಾಕರ್ ಹೇಳಿದ್ದಾರೆ.

- Advertisement -

Latest Posts

Don't Miss