ಹಾಸನ : ಮಾಜಿಸಿಎಂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ನಾವು ಅವರು ಆಪ್ತರಲ್ಲ ಅಂತ ಹೇಳಲು ಆಗುತ್ತ..? ನನ್ನ ಅವರ ವಿಶ್ವಾಸ ಬೇರೆ, ರಾಜಕೀಯ ಬೇರೆ. ಇವತ್ತು, ಮುಂದೆನೂ ಹೀಗೂ ಇರ್ತಿವಿ. ನಾನು ಸಿದ್ದರಾಮಯ್ಯ ಅವರು ಹೊಡೆದಾಡಲು ಆಗಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ನನಗೆ ಅವರು ಹಿಂದಿನಿಂದಲೂ ಆತ್ಮೀಯ, ನನಗು ಅಷ್ಟೇ. ಅವರು ಮುಖ್ಯಮಂತ್ರಿಗಳಿದ್ದಾಗ ನಮಗೆ ಗೌರವ ಕೊಟ್ಟಿದ್ದಾರೆ. ಅವರ ವಿರುದ್ಧ ಸಣ್ಣತನದಲ್ಲಿ ಮಾತನಾಡಲ್ಲ. ನಂದೆ ನೋಡಿಕೊಳ್ಳಲು ಆಗುತ್ತಿಲ್ಲ, ಅವರಿಗೆ ಸಲಹೆ ಕೊಡುವ ಮಟ್ಟಕ್ಕೆ ಬೆಳೆದಿಲ್ಲ . ವೈಯುಕ್ತಿಕವಾಗಿ ಟೀಕೆ ಮಾಡುವುದು ಒಳ್ಳೆಯದಲ್ಲ. ವೈಯುಕ್ತಿಕವಾಗಿ ಟೀಕೆ ಮಾಡುವ ಅಭ್ಯಾಸ ನನಗಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
‘ಅಸಡ್ಡೆ ತೋರುವಂತಹ ಮಂತ್ರಿಗಳಿಗೆ ಯಾಕೆ ತೋಟಗಾರಿಕೆ ಖಾತೆ ಕೊಡ್ತಿರಾ..?’
‘ರಮೇಶ್ ಜಾರಕಿಹೋಳಿ ಅವರು ಬಿಜೆಪಿ ಪಕ್ಷದಲ್ಲಿ ಬಹಳ ಆಳವಾಗಿ ಕೆಲಸ ಮಾಡುತ್ತಾರೆ’